ಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ೧೫ನೇ ವರ್ಷದ ನಗರ ಭಜನೆ ಹಾಗೂ ಮಂಗಳೋತ್ಸವ
ಕೈಕಂಬ: ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಶ್ರೀ ಆದಿಶಕ್ತಿ ಭಜನಾ ಮಂಡಳಿ ಹಾಗೂ ಮಾತೃ ಭಜನಾ ಮಂಡಳಿಯ ಸಹಯೋಗದೊಂದಿಗೆ ಗ್ರಾಮ ಸಭೀಕ್ಷೆ ಮತ್ತು ದರ್ಮ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ೧೫ನೇ ವರ್ಷದ ನಗರ ಭಜನೆ ಹಾಗೂ ಮಂಗಳೋತ್ಸವವು ದ.೨೪ರಂದು ಭಾನುವಾರ ನಡೆಯಲಿದೆ.
ನ.೨೪ರಂದು ಮಂಡಳಿಯ ಸದಸ್ಯರು ತಾಯಿ ಸನ್ನಿಧಿಯಲ್ಲಿ ಆದಿಶಕ್ತಿಯನ್ನು ಸ್ಮರಿಸಿ ನಗರ ಭಜನೆಯನ್ನು ಪ್ರಾರಂಭಿಸಿ ಊರಿನ ಪ್ರತಿ ಮನೆಗೆ ಹೋಗಿ ಮನೆಯಂಗಳದಲ್ಲಿ ತುಳಸಿಕಟ್ಟೆಯ ಸುತ್ತಲೂ ನಿಂತು ಕುಣಿತ ಭಜನೆ ಮಾಡುತ್ತಾ ಭಜನಾ ಸಂಕೀರ್ತನೆ ಹಾಡುತ್ತಾರೆ, ಹೀಗೆ ಮಂಗಳೋತ್ಸವದ ವರೆಗೆ ಮಾಡುತ್ತಾ ಬರುತ್ತಾರೆ ಇದು ನಗರ ಭಜನೆಯ ವಿಶೇಷತೆ.
ದ.೨೪ರಂದು ಸೂರ್ಯೋದಯದ ಸಮಯದಲ್ಲಿ ದೀಪ ಪ್ರಜ್ವಲನೆ ಮೂಲಕ ಭಜನೆ ಪ್ರಾರಂಭಿಸಿ ರಾತ್ರಿ ೯:೦೦ಗಂಟೆಯ ವರೆಗೆ ವಿವಿಧ ಭಜನಾ ತಂಡಳಿಗಳಿಂದ ಭಜನಾ ಸಂಕೀರ್ತನೆ ನಡೆದು ಭಜನಾ ಮಂಗಳೋತ್ಸವವು ಸಂಪನ್ನಗೊಳ್ಳುತ್ತದೆ.
ಸಭಾ ಕಾರ್ಯಕ್ರಮದಲ್ಲಿ ಶ್ರೀ ಆದಿಶಕ್ತಿ ಭಜನಾ ಮಂಡಳಿಯ ಹಿರಿಯ ಸದಸ್ಯ ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಹಾಗೂ ತೆಂಕಬೆಳ್ಳೂರು ಅಜಿನಡ್ಕ ಶ್ರೀರಾಘವೇಂದ್ರ ದೇಗುಲದ ಶ್ರೀ ಶಂಕರ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬಂಟ್ವಾಳ ತಹಶೀಲ್ದಾರ ನವೀನ್ ಬೆಂಜನಪದವು ಧಾರ್ಮಿಕ ಉಪನ್ಯಾಸ ನೀಡಲಿರುವರು.
ಬೆಂಜನಪದವು ಕೊರಗಜ್ಜ ಸಾನಿಧ್ಯದ ಧರ್ಮದರ್ಶಿ ವಿಜಯ್.ಕೆ, ಶ್ರೀ ಆದಿಶಕ್ತಿ ದೇವಸ್ಥಾನ ಬೆಳ್ಳೂರು ಕ್ಷೇತ್ರಾಧಿಕಾರಿ ಸಂದೀಪ್ ಸದಾಶಿವ ಬೆಳ್ಳೂರು, ಚಂದ್ರಹಾಸ ಪಲ್ಲಿಪಾಡಿ, ನೃತ್ಯಗುರು ದೀನರಾಜ್ ಕಳವಾರು, ಜನಾರ್ಧನ ಕೊಟ್ಟಾರಿ ಬೆಳ್ಳೂರು, ನಿಶಾಂತ್ ಬೆಳ್ಳೂರು, ಹಾಗೂ ಶ್ರೀ ಆದಿಶಕ್ತಿ ಭಜನಾ ಮಂಡಳಿಯ ಹಿರಿಯ ಸದಸ್ಯ ನಾರಾಯಣ ಮೂಲ್ಯ ಬೂನ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಶ್ರೀ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರಮೇಶ್ ಪೂಜಾರಿ, ಚಂದ್ರಹಾಸ್ ಪೂಜಾರಿ ಹಾಗೂ ವಸಂತ್ ಪೂಜಾರಿ ಇವರನ್ನು ಗೌರವಿಸಲಾಗುವುದು.
ಸಭಾಕಾರ್ಯಕ್ರಮದ ಬಳಿಕ ಊರಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು ಎಂದು ಶ್ರೀ ಆದಿಶಕ್ತಿ ಸೇವಾ ಸಮಿತಿ ಹಾಗೂ ಭಜನಾ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.