ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ೧೨ನೇ ವರ್ಷದ “ಏಕಾಹ ಭಜನೋತ್ಸವ”
ಕೈಕಂಬ: ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವಿನಲ್ಲಿ ೧೨ನೇ ವರ್ಷದ ಏಕಾಹ ಭಜನೋತ್ಸವವು ದ.೨೩ರಿಂದ ದ.೨೪ರ ವರೆಗೆ ನಡೆಯಲಿದೆ.

ಶ್ರೀ ಭದ್ರಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ಬಿ. ಹಾಗೂ ಲೋಕೇಶ್ ಶಾಂತಿಯವರ ನೇತೃತ್ವದಲ್ಲಿ ದ.೨೩ರಂದು ಶನಿವಾರ ಸೂರ್ಯೋದಯದಿಂದ ದ.೨೪ರ ಭಾನುವಾರ ಸೂರ್ಯೋದಯದ ವರೆಗೆ ಶ್ರೀ ಭದ್ರಕಾಳಿ ದೇವಸ್ಥಾನ ಸೇವಾನ್ಯಾಸ ಯಾನೆ ಟ್ರಸ್ಟ್(ರಿ) ಬೆಂಜನಪದವು ಇದರ ಹನ್ನೆರಡನೇ ವರ್ಷದ ಅಂಗವಾಗಿ ಶ್ರೀ ಭದ್ರಕಾಳಿ ದೇವಿಯ ಸನ್ನಿಧಿಯಲ್ಲಿ ವಿವಿಧ ಭಜನಾ ತಂಡಗಳು ಆಗಮಿಸಿ ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸುವ ಮೂಲಕ “ಏಕಾಹ ಭಜನೋತ್ಸವ”ವು ನಡೆಯಲಿದೆ ಎಂದು ಶ್ರೀ ಭದ್ರಕಾಳಿ ದೇವಸ್ಥಾನ ಸೇವಾನ್ಯಾಸ ಟ್ರಸ್ಟ್ ನ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.