ಮಾಪ್ಳ ಸರಕಾರಿ ಹಿ. ಪ್ರಾ. ಶಾಲೆಯ ತರಗತಿ ಕೊಠಡಿ ಉದ್ಘಾಟನಾ ಸಮಾರಂಭ; ಗುತ್ತಿಗೆದಾರ ಯಶೋಧರ ಕೆ. ಪೊಳಲಿ ಇವರಿಗೆ ಸನ್ಮಾನ
ಕೈಕಂಬ: ದ.ಕ.ಜಿ.ಪಂ., ಹಿ.ಪ್ರಾ.ಶಾಲೆ ಪುದು ಮಾಪ್ಳ, ಪರಂಗಿಪೇಟೆ ಟುಡೇ ಫೌಂಡೇಶನ್ ಇದರ ಸಹಕಾರದೊಂದಿಗೆ ಶಾಲಾ ನೂತನ ಕಟ್ಟಡ ಹಾಗೂ ಅಂಗನವಾಡಿ ಕೊಠಡಿಯ ಉದ್ಘಾಟನಾ ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವವು ದ.20ರಂದು ಮಂಗಳವಾರ ನಡೆಯಿತು.
ಸಭಾಕಾರ್ಯಕ್ರಮದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು. ಬಳಿಕ ಕಟ್ಟಡ ಹಾಗೂ ಅಂಗನವಾಡಿ ಕೊಠಡಿಯ ಉದ್ಘಾಟನಾ ಸಮಾರಂಭ ನೆರವೇರಿತು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಯಶೋಧರ ಕೆ. ಪೊಳಲಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪುದು ಗ್ರಾಂ.ಪಂ. ಅಧ್ಯಕ್ಷೆ ರಷೀದಾ ಬಾನು, ಪುದು ಗ್ರಾಂ.ಪಂ. ಉಪಾಧ್ಯಕ್ಷ ಮುಹಮ್ಮದ್ ಇಕ್ಬಾಲ್ ಸುಜೀರ್, ದ.ಕ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಫ್. ಉಮ್ಮರ್ ಫಾರೂಕ್ ಅಥಿತಿಗಳಾಗಿ ಆಗಮಿಸಿದ್ದರು.
ಸರಕಾರಿ ಹಿ.ಪ್ರಾ. ಶಾಲೆ ಪುದು ಮಾಪ್ಳ, ಪರಂಗಿಪೇಟೆಯ ಮುಖ್ಯೋಪಾದ್ಯಾಯಿನಿ ಯಮುನಾ ಮತ್ತು ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ರಮ್ಲಾನ್ ಹಾಗೂ ಸದಸ್ಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.