ವಿರಾಟ್ ಕ್ಲಿನಿಕಲ್ ಲ್ಯಾಬ್ ಅಡ್ಡೂರು ಅಲ್‌ಮದೀನಾ ಕಾಂಪ್ಲೆಕ್ಸ್ ಗೆ ಸ್ಥಳಾಂತರ; ನೂತನ ಲ್ಯಾಬ್ ಶುಭಾರಂಭ
ಕೈಕಂಬ: ಅಡ್ಡೂರಿನ ಅಲ್‌ಮದೀನಾ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡ ವಿರಾಟ್ ಕ್ಲಿನಿಕಲ್ ಲ್ಯಾಬ್ ನ ಶುಭಾರಂಭ ಕಾರ್ಯಕ್ರಮವು ದ.೧೮ರಂದು ಸೋಮವಾರ ನಡೆಯಿತು.

ಕ್ಲಿನಿಕಲ್ ಲ್ಯಾಬ್ ಶುಭಾರಂಭದ ಸಲುವಾಗಿ ದ.೧೮ರಂದು ರಿಯಾಯಿತಿ ದರದಲ್ಲಿ ಜನಸಾಮಾನ್ಯರಿಗಾಗಿ ವಿವಿಧ ಆರೋಗ್ಯ ಪರೀಕ್ಷಾ ಪ್ಯಾಕೇಜ್‌ಗಳನ್ನು ನೀಡಲಾಯಿತು.

ವಿರಾಟ್ ಕ್ಲಿನಿಕಲ್ ಲ್ಯಾಬ್‌ನ ಮಾಲಕರು ಲಕ್ಷ್ಮೀಶ್ ಶೆಟ್ಟಿ, ವನಿತಾ ಎಲ್. ಶೆಟ್ಟಿ ಹಾಗೂ ವಿರಾಟ್ ಎಲ್. ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು.


ಕಾರ್ಯಕ್ರಮಕ್ಕೆ ಡಾ. ಇ.ಕೆ.ಎ ಸಿದ್ದಿಕ್, ಡಾ. ಪುಷ್ಪರಾಜ್ ಶೆಟ್ಟಿ, ಡಾ. ಪುಷ್ಪಲತಾ ಭಂಡಾರಿ, ಡಾ. ಸ್ವಲೀಯತ್ ಆಯಿಶಾ, ಬಾಲಚಂದ್ರ ಶೆಟ್ಟಿ, ಎ.ಕೆ. ಅಶ್ರಫ್, ಎ.ಕೆ. ರಿಯಾಝ್, ಅಲ್‌ಮದೀನಾ ಕಾಂಪ್ಲೆಕ್ಸ್ ಕಟ್ಟಡದ ಮಾಲಕರು ರಶೀದ್ ಮತ್ತು ರಹೀಮ್, ಚಂದ್ರಹಾಸ ಪಲ್ಲಿಪಾಡಿ, ರೋಶನ್ ಅಮೀನ್, ಪ್ರಸಾದ್ ಗರೋಡಿ, ಅನೀಫ್ ಪಲ್ಲಿಪಾಡಿ, ಉಮೇಶ್ ಆಚಾರ್ಯ, ಸುಜಾತ ಸುರೇಂದ್ರ, ಅನ್ವರ್ ಅಡ್ಡೂರು, ಮುಸ್ತಫ ಪಲ್ಲಿಪಾಡಿ, ಲೋಕೇಶ್ ಭರಣಿ, ಕರಿಯಂಗಳ ಗ್ರಾಂ.ಪಂ. ಅಧ್ಯಕ್ಷ ರಾಧಾ ಲೋಕೇಶ್, ಉಪಾಧ್ಯಕ್ಷ ರಾಜು ಕೋಟ್ಯಾನ್ ಉಮೇಶ್ ಆಚಾರ್ಯ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕರಿಯಂಗಳ ಗ್ರಾಂ.ಪಂ ಪಿ.ಡಿ.ಓ ಮಾಲಿನಿ ಹಾಗೂ ಸಿಬ್ಬಂದಿವರ್ಗದವರು ಆಗಮಿಸಿ ಶುಭಹಾರೈಸಿದರು.



