ಅಕ್ಷಯ ಭಜನಾ ತಂಡದಿಂದ ಶ್ರೀ ಅಕ್ಷಯ ನಿವಾಸದಲ್ಲಿ “೧೦೧ನೇ ಮನೆಯ ಭಜನಾ ಮಹೋತ್ಸವ”
ಕೈಕಂಬ: ಅಡ್ಯಾರ್ ಪದವು “ಶ್ರೀ ಅಕ್ಷಯ ನಿವಾಸ”ದ ಗೃಹ ಪ್ರವೇಶದ ಪ್ರಯುಕ್ತ ನಡೆದ ಅಕ್ಷಯ ಭಜನಾ ತಂಡದ “೧೦೧ನೇ ಭಜನಾ ಮಹೋತ್ಸವ”ವು ದ.೧೯ರಂದು ಮಂಗಳವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ತಂಡಗಳು ಪಾಲ್ಗೊಳ್ಳುವುದರ ಮುಖೇನ ಭಜನಾ ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರಿತು.
ಭಜನಾ ಕಾರ್ಯಕ್ರಮದಲ್ಲಿ ನಿಯಮದ ಪ್ರಕಾರ ಒಂದು ತಂಡಕ್ಕೆ ಒಂದು ದೇವರ ಹತ್ತು ಭಜನೆಯ ಹಾಗೆ ಹತ್ತು ಭಜನಾ ತಂಡಗಳು ಭಾಗವಹಿಸಿದ್ದು ಭಜನಾ ಸಂಕೀರ್ತನೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು. ಯೋಗೇಶ್ ಕೆ. ಭಟ್ ಶ್ರೀ ಕ್ಷೇತ್ರ ಚಿಂತನೆ ಜಪ್ಪಿನಮೊಗರು ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಶ್ರೀಮತಿ ವಂದನಾ ಕರುಣಾಕರ್ ಜಿ. ಅಮೀನ್ ದಂಪತಿ, ಮಾಧವ ನಾಯಕ್ ಆರ್.ಕೆ ಅಡ್ಯಾರ್, ಹೋಟೆಲ್ ಅಟ್ಟಣೆ ಮಾಲಕ ಪುರುಷೋತ್ತಮ್ ಭಂಡಾರಿ ಶುಭಹಾರೈಸಿದರು.
ವಿಷೇವಾಗಿ ಶ್ರೀಮತಿ ರೇಖಾ ನಾಮ್‌ದೇವ್ ಪೂಜಾರಿ ದಂಪತಿ ಭಜನಾ ಕಾರ್ಯಕ್ರಮಕ್ಕೆ ಆಗಮಿಸಿದ ಭಜಕರನ್ನು ಹಣೆಗೆ ತಿಲಕಇಟ್ಟು ಬರಮಾಡಿಕೊಂಡರು.