ಅಡ್ಡೂರು ಬರ್ಕೆ ಮನೆ ಕುಟುಂಬಸ್ಥರ ತರವಾಡಿನ ಕೋಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಕೈಕಂಬ: ಅಡ್ಡೂರು ಬರ್ಕೆ ಮನೆ ಕುಟುಂಬಸ್ಥರ ತರವಾಡಿನಲ್ಲಿ ೨೦೨೪ ಜ.೩೦ರಂದು ಮಂಗಳವಾರದಿಂದ ಜ.೩೧ ಬುಧವಾರದವರೆಗೆ ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿರುವಂತಹ ಸತ್ಯದೇವತೆ ಮತ್ತು ಕುಪ್ಪೆಟ್ಟು ದೈವ ಹಾಗೂ ಕುಟುಂಬದ ರಾಹು ದೈವದ ಕೋಲೋತ್ಸವ ನಡೆಯಲಿದೆ.
ವಿಶೇಷವಾಗಿ ಕಳೆದ ಬಾರಿ ನಡೆದ ಕೋಲೋತ್ಸವದಲ್ಲಿ ಕುಪ್ಪೆಟ್ಟು ಪಂಜುರ್ಲಿ ನುಡಿದ ವಾಕ್ಯದ ಪ್ರಕಾರ ಈ ಬಾರಿ ಕುಟುಂಬದ ಸದಸ್ಯರು ಸೇರಿ ಒಮ್ಮತದಿಂದ ನಿರ್ಣಯ ಮಾಡಿದ ಪ್ರಕಾರ ಕುಪ್ಪೆಟ್ಟು ದೈವಕ್ಕೆ ದೊಂದಿ ಬೆಳಕಿನೊಂದಿಗೆ ” ದರಿ ” ನೇಮೋತ್ಸವ ನಡೆಯಲಿದೆ.
ನೇಮೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯನ್ನು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಅರ್ಚಕ ನಾರಾಯಣ ಭಟ್ ಹಾಗೂ ಸರಪಾಡಿ ಶಿವಪ್ರಸಾದ್ ಶಾಂತಿ ಡಿ.17ರಂದು ಭಾನುವಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶೋದನ್ ಶಾಂತಿ. ಟ್ರಸ್ಟ್ ನ ಅಧ್ಯಕ್ಷ ಗಣೇಶ್ ಪ್ರಸಾದ್ ಶಂಭೂರು, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಎಸ್. ಬಟ್ಟಾಜೆ, ಟ್ರಸ್ಟ್ ಹಾಗೂ ಸ್ಥಾಯಿ ಸಮಿತಿಯ ಪದಾಧಿಕಾರಿಗಳು, ಉಮೇಶ್ ಪೂಜಾರಿ ಹಾಗೂ ದೈವದ ಪರಿಚಾರಕರು, ಶ್ರೀ ಕ್ಷೇತ್ರ ನಂದ್ಯದ ಗುರಿಕಾರ ಚಿದಾನಂದ ನಂದ್ಯ ಹಾಗೂ ಕುಟುಂಬದ ಸರ್ವ ಸದಸ್ಯರು ಆಮಂತ್ರಣ ಪತ್ರ ಬಿಡುಗಡೆಯ ಸಂದರ್ಭ ಉಪಸ್ಥಿತರಿದ್ದರು.