ಷಷ್ಠಿ ಮಹೋತ್ಸವ ಯಕ್ಷಗಾನ ಬಯಲಾಟ ಸಮಿತಿಯಿಂದ ವಿಶ್ವನಾಥ ಗೌಡ ಅವರಿಗೆ ಸನ್ಮಾನ
ಕೈಕಂಬ: ಷಷ್ಠಿ ಮಹೋತ್ಸವ ಯಕ್ಷಗಾನ ಬಯಲಾಟ ಸಮಿತಿಯಿಂದ ವಿಶ್ವನಾಥ ಗೌಡ ಅವರಿಗೆ ಸನ್ಮಾನ ಹಾಗೂ ದಿ.ಜಗದೀಶ್ ನಲ್ಕರವರ ಕುಟುಂಬಕ್ಕೆ 10,000ರೂ. ಧನಸಹಾಯ ನೀಡುವ ಕಾರ್ಯಕ್ರಮವು ದ.18ರಂದು ಸೋಮವಾರದಂದು ನಡೆಯಿತು.
ಈ ಸಂದರ್ಭದಲ್ಲಿ ವೆಂಕಟೇಶ್ ನಾವಡ ಪೊಳಲಿ, ನಾರಾಯಣ ಪೂಜಾರಿ ಕಟ್ಟಪುಣಿ, ಸೇಸಪ್ಪ ದೇವಾಡಿಗ ಪೊಳಲಿ ಹಾಗೂ ಷಷ್ಠಿ ಮಹೋತ್ಸವ ಯಕ್ಷಗಾನ ಬಯಲಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.