Published On: Sun, Dec 10th, 2023

ಜಲ ಜೀವನ್ ಮಿಶನ್ ಯೋಜನೆಯಡಿ 6.77 ಕೋ.ರೂ. ವೆಚ್ಚದಲ್ಲಿ ಏಳು ಕಡೆ ಬೃಹತ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

ಬಂಟ್ವಾಳ: ಪುದು ಗ್ರಾಮದ ಜನರ ಹಲವು ವರ್ಷಗಳ ಬೇಡಿಕೆಯಾಗಿರುವ ಮನೆ ಮನೆಗೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕನಸು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರ ಪರಿಶ್ರಮದಿಂದ ಇಂದು ನನಸಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಹೇಳಿದರು.

ಜಲ ಜೀವನ್ ಮಿಶನ್ ಯೋಜನೆಯಡಿ 6 ಕೋಟಿ 77 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮನೆ ಮನೆಗೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ  ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಈ ಯೋಜನೆಯಡಿ ಪುದು ಗ್ರಾಮದ ಅಮ್ಮೆಮ್ಮಾರ್, ಪುಂಚಮೆ, ಫರಂಗಿಪೇಟೆ, ಪೇರಿಮಾರ್, ಕುಂಪನಮಜಲು, ನೆತ್ತರಕೆರೆ ಮತ್ತು ಸುಜೀರ್‌ನಲ್ಲಿ ಬೃಹತ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು.

1 ಲಕ್ಷ ಲೀಟರ್ ಸಾಮರ್ಥ್ಯದ 1 ಟ್ಯಾಂಕ್, 50 ಸಾವಿರ ಲೀಟರ್ ಸಾಮರ್ಥ್ಯದ 5 ಟ್ಯಾಂಕ್, 50 ಸಾವಿರ ಲೀಟರ್ ಸಾಮರ್ಥ್ಯದ 1 ಜಿ.ಎಲ್.ಎಸ್.ಆರ್ ಟ್ಯಾಂಕ್ ನಿರ್ಮಾಣವಾಗಲಿದೆ.

ಈ ಟ್ಯಾಂಕ್‌ಗಳಿಂದ ಪುದು ಗ್ರಾಮದ ಪ್ರತಿಯೊಂದು ಮನೆಗೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಸರಬರಾಜು ಆಗಲಿದೆ ಎಂದು ಅವರು ಹೇಳಿದರು.

ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ಸಮಗ್ರ ಕುಡಿಯುವ ನೀರಿನ ಯೋಜನೆ ಪುದು ಗ್ರಾಮದ ಹಲವು ವರ್ಷಗಳ ಬೇಡಿಕೆಯಾಗಿದೆ. ಅದನ್ನು ಶಾಸಕ ಯು.ಟಿ.ಖಾದರ್ ನನಸು ಮಾಡಿಕೊಟ್ಟಿದ್ದು, ಇದೀಗ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಈ ಯೋಜನೆಯ ಟ್ಯಾಂಕ್ ನಿರ್ಮಾಣಕ್ಕೆ ಅಮ್ಮೆಮ್ಮಾರ್‌ನಲ್ಲಿ ತನ್ನ ಸ್ವಂತ ಜಾಗವನ್ನು ನೀಡಿರುವ ಉದಾರ ಮನಸ್ಸಿನ ಅಬೂಸಾಲಿ ಅವರನ್ನು ಪಂಚಾಯತ್ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ರಶೀದಾ ಬಾನು, ಉಪಾಧ್ಯಕ್ಷ ಇಕ್ಬಾಲ್ ಸುಜೀರ್, ಸದಸ್ಯರಾದ ಲಿಡಿಯಾ ಪಿಂಟೊ, ಮುಮ್ತಾಝ್, ವಿಷು ಕುಮಾರ್, ರಝಾಕ್ ಅಮ್ಮೆಮ್ಮಾರ್, ಅನಸ್, ನಫೀಸ, ಶಾಫಿ, ರುಕ್ಷಾನ, ಸಾರಮ್ಮ, ಇಶಾಮ್ ಫರಂಗಿಪೇಟೆ, ಮಾಜಿ ಗ್ರಾ.ಪಂ.ಸದಸ್ಯ ಭಾಸ್ಕರ ರೈ, ಜೈ ಭಾರತ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹನೀಫ್ ಮಲ್ಲಿಗೆ, ಪ್ರಮುಖರಾದ ಬದ್ರುದ್ದೀನ್ ಕರ್ಮಾರ್, ಹನೀಫ್ ಗೋಳಿಕಟ್ಟೆ, ಶಿವಪ್ಪ ಅಂಚನ್, ಇಮ್ರಾನ್ ಅಮ್ಮೆಮಾರ್, ನಿಝಾಮ್, ಗುತ್ತಿಗೆದಾರ ಕೆ.ಕೆ.ಅಬೂಬಕ್ಕರ್, ಎಂಜಿನಿಯರ್ ರವಿ, ಪಿ.ಡಿ.ಒ. ಹರೀಶ್ ಕೆ. ಮೊದಲಾದವರು ಉಪಸ್ಥಿತರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter