ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯಧನದ ಚೆಕ್ ಹಸ್ತಾಂತರ
ಬಂಟ್ವಾಳ: ಬಂಟ್ವಾಳ ತಾಲೂಕಿನ ಅರ್ಕುಳ – ಮೇರಮಜಲು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ಜೀರ್ಣೋದ್ದಾರಗೊಳ್ಳುತ್ತಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಒಂದು ಲಕ್ಷ ರೂ. ಸಹಾಯಧನದ ಚೆಕ್ಕನ್ನು ಹಸ್ತಾಂತರಿಸಲಾಯಿತು.

ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಮಾದವ ಗೌಡ ಸಮಿತಿಗೆ ಸಹಾಯ ಧನದ ಚೆಕ್ಕನ್ನು ಹಸ್ತಾಂತರಿಸಿದರು.
ಈ ಸಂದರ್ಭ ಬಿಲ್ಲವ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ತುಪ್ಪೆ ಕಲ್ಲು, ಗೌರವ ಅಧ್ಯಕ್ಷೆ ಸುಜಾತ ವಿಜಯ ಕುಮಾರ್ ಬಂಗುಳೆ, ತುಂಬೆ ವಲಯದ ಜನಜಾಗೃತಿ ವೇದಿಕೆಯ ಸದಸ್ಯ ಸದಾನಂದ ಆಳ್ವ ಕಂಪ, ಗಣ್ಯರಾದ ನಾಗರಾಜ್ ಶೆಟ್ಟಿ ಅರ್ಕುಳ, ತುಂಬೆ ವಲಯ ಮೇಲ್ವಿಚಾರಕಿ ಮಮತಾ, ಸೇವಾ ಪ್ರತಿನಿಧಿ ಅಮಿತಾ, ಒಕ್ಕೂಟದ ಅಧ್ಯಕ್ಷ ಸುಕೇಶ್ ಶೆಟ್ಟಿ ತೇವು, ಬಿಲ್ಲವ ಸಂಘದ ಗೌರವ ಸಲಹೆಗಾರರು ನಾರಾಯಣ ಪೂಜಾರಿ ಕೊಪ್ಪಳ, ಮಾಜಿ ಉಪಾಧ್ಯಕ್ಷರು ರಂಜಿನಿ ಬಂಗುಳೆ ಹಾಗೂ ಪದಾಧಿಕಾರಿಗಳಾದ ಚೇತನ್ ಕೊಪ್ಪಳ, ಹರೀಶ್ ಮೇರೆ ಮಜಲು, ದಿನೇಶ್ ಪಕ್ಕಲ್ ಪಾದೆ, ಮಂಜುನಾಥ್ ತುಪ್ಪೆ ಕಲ್ಲು, ರಾಜೇಶ್ ಅರ್ಕುಲ ಬೈಲು, ಮೋನಪ್ಪ ಪೂಜಾರಿ ಅರ್ಕುಲ ಬೈಲು, ಶಾಂತ ರಮೇಶ್ ಬಂಗುಳೆ, ಹನುಮಾನ್ ಸೇವಾ ಸಂಘದ ಉಪಾಧ್ಯಕ್ಷ ಗಣೇಶ್ ತುಪ್ಪೆ ಕಲ್ಲು, ಪ್ರಭಾಕರ ಆಚಾರ್ಯ ತುಪ್ಪೆ ಕಲ್ಲು ಉಪಸ್ಥಿತರಿದ್ದರು.