ಬಂಟ್ವಾಳ: ತಾಲೂಕು ಸಂಜೀವಿನಿ ಒಕ್ಕೂಟಕ್ಕೆ ಆಯ್ಕೆ
ಬಂಟ್ವಾಳ: ಮುಖ್ಯ ಪುಸ್ತಕ ಬರಹಗಾರ(ಎಂಬಿಕೆ)ರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ(ಎಲ್‌ಸಿಆರ್‌ಪಿ)ಗಳ ಯೂನಿಯನ್ ಅಧ್ಯಕ್ಷರಾಗಿ ಕಾವಳಪಡೂರು ಸಂಜೀವಿನಿ ಒಕ್ಕೂಟದ ಎಂಬಿಕೆ ಸೌಮ್ಯ ಯಶವಂತ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಗೋಳ್ತಮಜಲು ಸಂಜೀವಿನಿ ಒಕ್ಕೂಟದ ಎಂಬಿಕೆ ಭವಾನಿ, ಕಾರ್ಯದರ್ಶಿಯಾಗಿ ರಾಯಿ ಗ್ರಾ.ಪಂ.ಒಕ್ಕೂಟದ ಎಲ್‌ಸಿಆರ್‌ಪಿ ಅಕ್ಷತಾ, ಜತೆ ಕಾರ್ಯದರ್ಶಿ ಕೊಳ್ಳಾಡು ಗ್ರಾ.ಪಂ.ಎಲ್‌ಸಿಆರ್‌ಪಿ ಚಂದ್ರಕಲಾ, ಕೋಶಾಧಿಕಾರಿ ಸಜೀಪಮುನ್ನೂರು ಎಂಬಿಕೆ ಸುನೀತಾ ಹಾಗೂ ೧೦ ಮಂದಿ ಮುಖ್ಯ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.