ಬಂಟ್ವಾಳ: ಸಿದ್ದಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ “ಮೇಕ್ ಇನ್ ಇಂಡಿಯಾ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ವಿದ್ಯಾ .ಕೆ ಅವರು ಮಾತನಾಡಿ ‘ಸ್ವಾವಲಂಬಿ ಸ್ವ-ಪರಿಪೂರ್ಣ ಭಾರತ ನಿರ್ಮಾಣ “ಮೇಕ್ ಇನ್ ಇಂಡಿಯಾ” ಕಾರ್ಯಕ್ರಮದ ಉದ್ದೇಶವಾಗಿದೆ.
ಪಾವತಿ ಶೇಷದ ಅಸಮತೋಲನವನ್ನು ಸರಿಪಡಿಸುವಿಕೆ, ಉದ್ಯೋಗದ ಅವಕಾಶಗಳ ಹೆಚ್ಚಿಸುವಿಕೆ, ಮೂಲ ಸೌಕರ್ಯ ವೃದ್ಧಿ ಇವುಗಳ ಆಶಯದೊಂದಿಗೆ ೨೦೧೪ರಿಂದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇದರಿಂದಾಗಿ ಅಟೋಮೊಬೈಲ್, ಔಷಧ ರಂಗ, ಮಾಹಿತಿ ತಂತ್ರಜ್ಞಾನ ಉತ್ಪಾದನೆಯಲ್ಲಿ ಗಣನೀಯ ಏರಿಕೆಯಾಗಿದೆ. ಆತ್ಮನಿರ್ಭರತೆಯ ಚಿಂತನೆಯಲ್ಲಿ ದೇಸೀತನ ಅಭಿವೃದ್ಧಿಪಡಿಸಲು ಸಾಧ್ಯ ಎಂದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಹರಿಪ್ರಸಾದ್ ಬಿ ಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಸಂಚಾಲಕ ವಿನಯ್ ಎಂ.ಎಸ್, ಡಾ. ಸುಂದ್ರೇಶ ಎನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಯಶೋಧ ಕಾರ್ಯಕ್ರಮ ಸಂಯೋಜಿಸಿದ್ದರು. ಮೋಹಿನಿ ಸ್ವಾಗತಿಸಿದರು. ಶ್ವೇತಾ ಆರ್ ವಂದಿಸಿದರು. ನಿಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.
