ಸರಳವಾಗಿ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಕಲ್ಲಡ್ಕ ಓಂ ಸಾಯಿ ಗಣೇಶ್ ಸೇವಾ ಟ್ರಸ್ಟ್
ಬಂಟ್ವಾಳ: ಸೇವಾ ಮನೋಭಾವನೆಯ ಯುವಕರನ್ನೊಳಗೊಂಡ ಕಲ್ಲಡ್ಕ ಓಂ ಸಾಯಿ ಗಣೇಶ್ ಸೇವಾ ಟ್ರಸ್ಟ್ ಕಳೆದ 3 ವರ್ಷಗಳಿಂದ ತನ್ನ ಗಳಿಕೆಯಲ್ಲಿ ಉಳಿತಾಯ ಮಾಡಿದ ಒಂದಿಷ್ಟು ಮೊತ್ತವನ್ನು ಸಾಮಾಜಿಕ ಸೇವಾ ಚಟುವಟಿಕೆಗೆ ವಿನಿಯೋಗಿಸಿ ವಾರ್ಷಿಕೋತ್ಸವವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸುತ್ತಿದೆ.

ಈ ವರ್ಷ ಕನ್ಯಾನದ ಭಾರತ ಸೇವಾಶ್ರಮದ ಆಶ್ರಮವಾಸಿಗಳಿಗೆ ಒಂದು ದಿನದ ಅನ್ನದಾನದ ವ್ಯವಸ್ಥೆಯನ್ನು ಮಾಡುವುದರ ಮೂಲಕ ವಿಶೇಷವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದು ಆಶ್ರಮವಾಸಿಗಳೊಂದಿಗೆ ಒಂದಷ್ಟು ಹೊತ್ತು ಕಳೆದರಲ್ಲದೆ ಆಶ್ರಮದ ಮುಖ್ಯಸ್ಥ ಈಶ್ವರ ಭಟ್ ರವರಿಗೆ 20 ಸಾವಿರ ಸಹಾಯಧನದ ಚೆಕ್ ನ್ನು ಹಸ್ತಾಂತರಿಸಿದರು.
ಇದುವರೆಗೆ ಸೇವಾ ಸಂಘದ ಸದಸ್ಯರೆಲ್ಲರ ಸಹಕಾರದಲ್ಲಿ ಸುಮಾರು 4,30,975.00 ಮೊತ್ತವನ್ನು ಸಮಾಜದ ಅಶಕ್ತ ಬಡ ಕುಟುಂಬಗಳಿಗೆ ನೀಡಿದ್ದಾರೆ.