ನದಿಗೆ ಹಾರಿದ ಯುವಕ : ತನಿಖೆ ನಡೆಸುತ್ತಿರುವ ಪೋಲಿಸರು
ಕೈಕಂಬ: ಕಾವೂರು ಆಕಾಶಭವನದ ನಿವಾಸಿ ಬಿ.ಪ್ರಶಾಂತ್ ಕುಮಾರ್(40) ನದಿಗೆ ಹಾರಿದ ವ್ಯಕ್ತಿ. ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ವಿವಾಹಿತನಾಗಿದ್ದು ಒಂದು ಮಗು ಇದೆ, ಇತ್ತೀಚಿನ ದಿನಗಳಲ್ಲಿ ಪ್ರಶಾಂತ್ ಮಾನಸಿಕ ಅಸ್ವಸ್ಥನಂತೆ ನಡೆದುಕೊಳ್ಳುತ್ತಿದ್ದ ಎಂಬುದನ್ನು ತಿಳಿಸಿರುತ್ತಾರೆ.

ನ.೨೧ ರಂದು ಗೆಳೆಯನೊಂದಿಗೆ ಪೊಳಲಿ ದೇವಸ್ಥಾನಕ್ಕೆ ಬಂದಿದ್ದು ದೇವಸ್ಥಾನಕ್ಕೆ ತೆರಳುವ ಮುನ್ನ ನದಿಯಲ್ಲಿ ಸ್ನಾನ ಮಾಡಿ ಹೋಗುವ ಎಂದು ಗೆಳೆಯನಲ್ಲಿ ಹೇಳಿ ಸ್ನಾನ ಮಾಡಿತ್ತಿರುವಾಗ ಶೂ ಸೋಲ್ ನೀರಿನಲ್ಲಿ ಹೋಯಿತೆಂದು ಅದನ್ನು ತರುವುದಾಗಿ ಹೋಗಿ ನದಿಗೆ ಹಾರಿದ್ದಾರೆಂದು ಪ್ರಶಾಂತ್ ಜೊತೆ ಬಂದಿದ್ದ ಯುವಕ ಹೇಳಿರುತ್ತಾನೆ.

ಘಟನೆ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಪಲ್ಗುಣಿ ನದಿಯಲ್ಲಿ ಹಾರಿದ ವ್ಯಕ್ತಿಯನ್ನು ಹುಡುಕುತ್ತಿದ್ದು ಹಾಗೂ ಬಜ್ಪೆ ಠಾಣಾ ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.


