ನ.21ರಂದು ಪೊಳಲಿ ಪಲ್ಗುಣಿ ನದಿಗೆ ಹಾರಿದ ಯುವಕನ ಶವ ಪತ್ತೆ
ಕೈಕಂಬ: ಕಾವೂರು ಆಕಾಶಭವನದ ನಿವಾಸಿ ಬಿ.ಪ್ರಶಾಂತ್ ಕುಮಾರ್(40) ನ.21ರಂದು ಮಂಗಳವಾರ ನದಿಗೆ ಬಿದ್ದಿದ್ದು, ನ.22ರಂದು ಬುಧವಾರ ಶವ ಪತ್ತೆಯಾಗಿದೆ.

ಗೆಳೆಯನೊಂದಿಗೆ ಪೊಳಲಿ ದೇವಸ್ಥಾನಕ್ಕೆ ಬಂದಿದ್ದು ದೇವಸ್ಥಾನಕ್ಕೆ ತೆರಳುವ ಮುನ್ನ ಪಲ್ಗುಣಿ ನದಿಯಲ್ಲಿ ಸ್ನಾನ ಮಾಡಿ ಹೋಗುವ ಎಂದು ಗೆಳೆಯನಲ್ಲಿ ಹೇಳಿ ಸ್ನಾನ ಮಾಡಿತ್ತಿರುವಾಗ ಶೂ ಸೋಲ್ ನೀರಿನಲ್ಲಿ ಹೋಯಿತೆಂದು ಅದನ್ನು ತರುವುದಾಗಿ ಹೋಗಿ ನದಿಗೆ ಬಿದ್ದ ಘಟನೆ ನ.21ರಂದು ನಡೆದಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಅಡ್ಡೂರಿನ ನಾಗರಿಕರು ಪ್ರಶಾಂತ ನನ್ನು ನದಿಯಲ್ಲಿ ಹುಡುಕಾಡಿದ್ದರೂ ಶವ ಪತ್ತೆಯಾಗಿರಲಿಲ್ಲ.


ನ.22ರಂದು ಬುಧವಾರ ಮಧ್ಯಾಹ್ನ ಸುಮಾರು 2:30ರ ವೇಳೆಗೆ ಆಪತ್ಬಾಂಧವ ಈಶ್ವರ್ ಮಲ್ಪೆ ನೇತೃತ್ವದಲ್ಲಿ ನಡೆದ ಹುಡುಕಾಟದಲ್ಲಿ ಪಲ್ಗುಣಿ ನದಿಯ ಬದಿಯಲ್ಲಿದ್ದ ರಿಂಗ್ ಬಾವಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಶವ ಪತ್ತೆಯಾಗಿದ್ದು ಅದನ್ನು ಮೇಲಕ್ಕೆತ್ತಿ ಆಪತ್ಬಾಂಧವ ಈಶ್ವರ್ ಮಲ್ಪೆ ಆಂಬ್ಯುಲೆನ್ಸ್ ನಲ್ಲಿ ಶವವನ್ನು ಸಾಗಿಸಲಾಗಿದೆ.


