ಸಾಮ್ರಾಟ್ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸಾಮ್ರಾಟ್ ಉತ್ಸವ, ಗೊಬ್ಬುದ ಗೌಜಿ 2023
ಕೈಕಂಬ: ಸಾಮ್ರಾಟ್ ಫ್ರೆಂಡ್ಸ್ ಸರ್ಕಲ್, ಕುಡುಪು ಕಟ್ಟೆ ಇವರ ಆಶ್ರಯದಲ್ಲಿ ಸಾಮ್ರಾಟ್ ಉತ್ಸವ, ಗೊಬ್ಬುದ ಗೌಜಿ 2023 ಕಾರ್ಯಕ್ರಮವು ನ.12 ಭಾನುವಾರದಂದು ಕುಡುಪು ಭಟ್ರ ಕಲ್ಲುರ್ಟಿ ಮುಂಭಾಗದ ಗದ್ದೆಯಲ್ಲಿ ಆಟೋಟ ಸ್ಪರ್ಧೆ ನಡೆಯಲಿದೆ.

ವಿವಿಧ ಸ್ಪರ್ಧೆಗಳು:
ಮಕ್ಕಳ ವಿಭಾಗದಲ್ಲಿ 1ರಿಂದ 7ನೇ ತರಗತಿಯ ಬಾಲಕ ಬಾಲಕಿಯರ ವಿಭಾಗದಲ್ಲಿ 50ಮೀ ಓಟ, ಸೊಪ್ಪಾಟ, ನೂಲು ಚಕ್ಕುಲಿ, ಡೊಂಕ ಓಟ. 8ರಿಂದ 12ನೇ ತರಗತಿಯ ಬಾಲಕ ಬಾಲಕಿಯರಿಗೆ 100ಮೀ ಓಟ, ಡೊಂಕ ಓಟ, ಗುಂಡು ಎಸೆತ, ಬಲೂನ್ ಕಾಳಗ.
ಮಹಿಳೆಯರಿಗೆ ತ್ರೋಬಾಲ್, ಪುರುಷರಿಗೆ ವಾಲಿಬಾಲ್, ಹಗ್ಗ-ಜಗ್ಗಾಟ, ಲಗೋರಿ, ಮಡಿಕೆ ಹೊಡೆಯುವುದು ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.