ಅಮ್ಮುಂಜೆಯಲ್ಲಿ ನಡೆದ 22ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವರ್ಷಾಚರಣೆ “ಸವಿನೆನಪು” ಕಾರ್ಯಕ್ರಮ
ಕೈಕಂಬ: ಅಮ್ಮುಂಜೆಯಲ್ಲಿ 2022ರ ನ.12 ಹಾಗೂ 13ರಂದು 22ನೇ ಕನ್ನಡ ಸಾಹಿತ್ಯ ನಡೆದ ಸಮ್ಮೇಳನದ ವರ್ಷಾಚರಣೆಯ ನೆನಪಿಗೋಸ್ಕರ ಹಮ್ಮಿಕೊಳ್ಳಲಾದ “ಸವಿನೆನಪು” ಕಾರ್ಯಕ್ರಮವು ನ.11 ಶನಿವಾರ ಮದ್ಯಾಹ್ನ ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀ ನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನಾಧ್ಯಕ್ಷ ಪ್ರೊ. ಬಾಲಕೃಷ್ಣ ಗಟ್ಟಿ ಹಾಗೂ ಮುಖ್ಯ ಅತಿಥಿಗಳಾಗಿ ಜಿ. ಶಂಕರ ಶೆಟ್ಟಿ ಗುಂಡಿಲಗುತ್ತು, ಡಾ. ಎ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಲುವಿಜಾ ಕುಟಿನೊಃ, ಲಕ್ಷ್ಮೀ ಬೆಂಜನಪದವು, ರಾಧಾಕೃಷ್ಣ ತಂತ್ರಿ ಪೊಳಲಿ, ಸುಗುಣಾ ಸಂಕಪ್ಪ ಶೆಟ್ಟಿ, ಡಾ. ಮಾಧವ ಎಂ.ಕೆ, ರಾಜೇಶ್ವರಿ, ವಿ.ಸು.ಭಟ್, ರಮಾನಂದ ನೂಜಿಪ್ಪಾಡಿ, ಡಿ.ಬಿ.ಅಬ್ದುಲ್ ರಹಿಮಾನ್, ಉಮೇಶ್ ಸಾಲ್ಯಾನ್, ಬಿ.ಮಹಮ್ಮದ್ ಬಟ್ಲಬೆಟ್ಟು ಉಪಸ್ಥಿತರಿದ್ದರು.
ಸಮ್ಮೇಳನದ ಅವಲೋಕನವನ್ನು ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾಸರಗೋಡು ಪೆರಿಯ ಕೇರಳ ಕೇಂದ್ರೀಯ ವಿವಿ ಸಹಾಯಕ ಪ್ರಾಧ್ಯಾಪಕ ಚೇತನ್ ಮುಂಡಾಜೆ ಉಪನ್ಯಾಸ ನೀಡಿದರು.
ಬಳಿಕ ವಿಠಲ ನಾಯಕ್ ಮತ್ತು ಬಳಗದಿಂದ ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.