ರೈತ ಉತ್ಪಾದಕರ ಕಂಪನಿ ಕಛೇರಿ ಉದ್ಘಾಟನಾ ಸಮಾರಂಭ
ಕೈಕಂಬ: ಗುರುಪುರ ಕೈಕಂಬ ಪೊಂಪೈ ಮಾತಾ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕೈಕಂಬ ರೈತ ಉತ್ಪಾದಕರ ಕಂಪೆನಿ ಕಛೇರಿ ಉದ್ಘಾಟನಾ ಸಮಾರಂಭವು ನ.10 ಶನಿವಾರದಂದು ನಡೆಯಿತು.

ಮಂಗಳೂರು ಹಾಲು ಉತ್ಪಾದಕರ ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಕೆ.ಎಂ.ಎಫ್ ನ ನಿರೇಶಕರು ಆಗಿರುವ ಸುಭದ್ರಾ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೃಷಿಯಲ್ಲಿ ಇಷ್ಟದಿಂದ ಕಷ್ಟಪಟ್ಟು ನಿಷ್ಠೆಯಿಂದ ದುಡಿದರೆ ಯಾವುದೇ ನಷ್ಟವಿಲ್ಲ. ಕೃಷಿಯಿಂದ ರೈತರು ನೆಮ್ಮದಿಯ ಬದುಕನ್ನು ಕಾಣಲು ಸಾಧ್ಯವಿದೆ. ರೈತ ಉತ್ಪಾದಕ ಕಂಪೆನಿಯು ಉತ್ತಮ ಅಭಿವೃದ್ಧಿಯನ್ನು ಕಾಣಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳೂರು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಮಾತನಾಡಿ, ಗುರುಪುರ ಹೋಬಳಿಯಲ್ಲಿ ಆರಂಭವಾದ ರೈತ ಉತ್ಪಾದಕ ಕಂಪೆನಿಯ ಮೂಲಕ ರೈತರಿಗೆ ಉತ್ತಮ ಸೌಲಭ್ಯಗಳು ದೊರೆಯುವಂತಾಗಲಿ, ಕಂಪೆನಿಗೆ ಬೇಕಾದ ಎಲ್ಲಾ ಸಲಹೆ ಸಹಕಾರವನ್ನು ಇಲಾಖೆಯಿಂದ ನೀಡುವುದಾಗಿ ತಿಳಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಇಕೋವಾ ಸಂಸ್ಥೆಯ ಸ್ಟೇಟ್ ಮ್ಯಾನೇಜರ್ ತಿಪ್ಪೇಸ್ವಾಮಿ ರೈತ ಉತ್ಪಾದಕ ಕಂಪೆನಿಗೆ (ಎಫ್.ಪಿ.ಒ) ದೊರೆಯುವ ಸರಕಾರದ ಅನುದಾನ, ಯೋಜನೆಗಳ ಬಗ್ಗೆ, ಮಾರ್ಗದರ್ಶನದ ಸಂಪೂರ್ಣ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಕೈಕಂಬ ರೈತ ಉತ್ಪಾದಕರ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಲೋರೆನ್ಸ್ ನೋರ್ಟ್ ಸಿಕ್ವೇರಾ ವಹಿಸಿಕೊಂಡಿದ್ದರು.
ಅತಿಥಿಗಳಾಗಿ ಕಂದಾವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೌಮ್ಯ.ಡಿ, ಇಕೋವಾ ಸಂಸ್ಠೆಯ ಜಿಲ್ಲಾ ಸಂಯೋಜಕ ಸತೀಶ್ ನಾಯ, ದಿಶಾ ಸಂಸ್ಥೆಯ ನಿರ್ದೇಶಕರೂ ರೈತ ಉತ್ಪಾದಕ ಕಂಪೆನಿಯ ಸಲಹಾ ಸಮಿತಿಯ ಸಂಚಾಲಕರೂ ಆಗಿರುವ ಸಿಲ್ವೆಸ್ಟರ್ ಡಿ ಸೋಜ, ಎಸ್.ಬಿ.ಐ ಬ್ಯಾಂಕ್ ನ ಪ್ರಬಂಧಕರು, ದಿಶಾ ಸಂಸ್ಥೆಯ ಸಂಯೋಜಕರು, ಸಿಬ್ಬಂದಿ ವರ್ಗ, ರೈತ ಉತ್ಪಾದಕ ಕಂಪೆನಿಯ ಎಲ್ಲಾ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಕಛೇರಿ ಸಿಬ್ಬಂದಿ ಸ್ವರ್ಣ ಸ್ವಾಗತಿಸಿ, ನಿರ್ದೇಶಕ ಜಾನ್ ಮೊರಾಸ್ ವಂದಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುಣವತಿ ಕಾರ್ಯಕ್ರಮ ನಿರೂಪಿಸಿದರು.