ಹರಿಕಥಾ ಸಪ್ತಾಹದಲ್ಲಿ “ಶ್ರೀ ರಾಮಕೃಷ್ಣ ಅವತಾರ ಲೀಲೆ” ಕಥಾನಕ
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಡೆಯುತ್ತಿರುವ ಹರಿಕಥಾ ಸಪ್ತಾಹದಲ್ಲಿ ನ.೮ ಬುಧವಾರದಂದು ಡಾ. ಎಸ್.ಪಿ. ಗುರುದಾಸ್ ಇವರಿಂದ “ಶ್ರೀ ರಾಮಕೃಷ್ಣ ಅವತಾರ ಲೀಲೆ” ಎಂಬ ಕಥಾನಕದ ಹರಿಕಥೆ ನಡೆಯಿತು.
ಹರಿಕಥಾ ವಾಚನದ ಸಂದರ್ಭದಲ್ಲಿ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ, ಆಶ್ರಮದ ಮಕ್ಕಳು, ಇನ್ನಿತರರು ಉಪಸ್ಥಿತರಿದ್ದು ಕಥಾ ಶ್ರವಣ ಮಾಡಿದರು.