ಗಂದಾಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ ಜೀರ್ಣೋದ್ಧಾರ ಆಶ್ಲೇಷ ಬಲಿ, ಮೃತ್ಯುಂಜಯ ಹೋಮ
ಕೈಕಂಬ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮದ ಗಂದಾಡಿ ಎಂಬಲ್ಲಿ ಪುರಾತನ ಕಾಲದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ೧೬ ಆಶ್ರಿತ ದೇವಸ್ಥಾನಗಳಲ್ಲಿ ಒಂದಾದ ಗಂದಾಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನವು ಹಲವು ಕಾಲದಿಂದ ಶಿಥಿಲಗೊಂಡಿದ್ದು ಪಾಳು ಬಿದ್ದಿತ್ತು.
ಬೇರೆ ಧರ್ಮದವರಲ್ಲಿದ್ದ ಜಾಗವನ್ನು ರಂಗನಾಥ ಭಟ್ ಹಣಕೊಟ್ಟು ಖರೀದಿ ಮಾಡಿ ಅಲ್ಲಿ ಸೋಮನಾಥ ದೇವರ ಲಿಂಗ ಇರುವುದನ್ನು ಗಮನಿಸಿ ಹಲವರನ್ನು ಸೇರಿಸಿ ಒಂದು ದೇವಾಲಯವನ್ನು ನಿರ್ಮಿಸಬೇಕೆಂದು ಅಭಿಪ್ರಾಯ ಪಟ್ಟಿದ್ದರು.
ಈ ಹಿನ್ನಲೆಯಲ್ಲಿ ನ.೬ ಸೋಮವಾರ ಬೆಳಗ್ಗೆ ಗಣಹೋಮ, ಪೊಳಲಿ ಅರ್ಚಕ ಅನಂತ್ ಭಟ್ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ಹಾಗೂ ಸುಬ್ರಮಣ್ಯ ಭಟ್ ಪೊಳಲಿ, ನಾರಾಯಣ್ ಭಟ್ ಪೊಳಲಿ ಇವರಿಂದ ನಾಗಬನದಲ್ಲಿ ಆಶ್ಲೇಷ ಬಲಿ ನೆರವೇರಿತು. ಮುಷ್ಠಿಕಾಣಿಕೆಯೊಂದಿಗೆ ಕಾರ್ಯಕ್ರಮ ಪೂರ್ಣಗೊಂಡಿತು.
ನಾರಾಯಣ ಭಟ್, ಕಮಲಾಕ್ಷ ಭಟ್, ಡಾ.ರಾಮ್ ಮೋಹನ್ ರಾವ್ ರಾಯರಬೆಟ್ಟು, ರಂಗನಾಥ ಭಟ್, ವಾಸುದೇವ ರಾವ್ ಪೊಳಲಿ , ಧನಂಜಯ ಭಟ್, ನೂಯಿ ಬಾಲಕೃಷ್ಣ ರಾವ್, ರವಿಶಂಕರ್ ನೂಯಿ, ನಂದ್ಯಾ ಚಿದಾನಂದ ಗುರಿಕಾರ, ಸುಬ್ಬಯ್ಯ ಭಂಡಾರಿ, ಅಶೋಕ್ ನಂದ್ಯಾ, ಪೊಳಲಿ ದೇವಳದ ಅರ್ಚಕ ಅನಂತ್ ಭಟ್, ಸುಬ್ರಮಣ್ಯ ಭಟ್ ಪೊಳಲಿ, ಚಂದ್ರಶೇಖರ ರಾವ್ ಅಡ್ಡೂರು, ಬೋಜ ಅಡ್ಡೂರು ಪಲ್ಲನೆಲ ಹಾಗೂ ಮಾಧವ ಕುಲಾಲ್ ಉಪಸ್ಥಿತರಿದ್ದರು.