ಗೋಳಿದಡಿಗುತ್ತಿನಲ್ಲಿ ರಕ್ಷಾ ಬಂಧನ ಕಾರ್ಯಕ್ರಮ
ಕೈಕಂಬ: ಗುರುಪುರದ ಗೋಳಿದಡಿಗುತ್ತಿನ ಚಾವಡಿಯಲ್ಲಿ ಗುತ್ತಿನ ಯಜಮಾನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮತ್ತು ಅವರ ಪತ್ನಿ ಉಷಾ ಡಿ. ಶೆಟ್ಟಿ ನೇತೃತ್ವದಲ್ಲಿ ಅ. ೩೧ರಂದು ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಚಾವಡಿ ಮಿತ್ರರನ್ನುದ್ದೇಶಿಸಿ ಮಣಿಪಾಲ ಎಂಐಟಿ ಪ್ರೊಫೆಸರ್ ಆಶಾ ಉದಯ ರಾವ್ ಅವರು ರಕ್ಷಾ ಬಂಧನದ ಮಹತ್ವ ತಿಳಿಸಿದರು.