ದೇವರಗುಡ್ಡೆ ಶ್ರೀ ಸಾಂಬ ಸದಾಶಿವ ದೇವರ ಬಾಲಾಲಯ ಪ್ರತಿಷ್ಠೆ
ಕೈಕಂಬ: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಬಾರ್ದಿಲ ದೇವರಗುಡ್ಡೆ ಶ್ರೀ ಸಾಂಬ ಸದಾಶಿವ ದೇವಸ್ಥಾನದ ಜೀರ್ಣೋದ್ದಾರದ ಅಂಗವಾಗಿ, ನೂತನ ಶಿಲಾಮಯ ಗರ್ಭಗುಡಿ ನಿರ್ಮಾಣದ ಪ್ರಯುಕ್ತ ಶ್ರೀದೇವರ ಬಾಲಾಲಯ ಪ್ರತಿಷ್ಠೆಯು ನಡೆಯಿತು.

ದೇರೆಬೈಲು ಡಾ. ಡಿ.ಶಿವಪ್ರಸಾದ್ ತಂತ್ರಿಗಳ ನೇತೃತ್ವದಲ್ಲಿ, ಪ್ರಧಾನ ಅರ್ಚಕ ರಾಘವೇಂದ್ರ ಕಾರಂತರ ಉಪಸ್ಥಿತಿಯಲ್ಲಿ, ಋತ್ವಿಜರ ವೇದ ಮಂತ್ರ ಘೋಷಗಳೊಂದಿಗೆ, ನೆರೆದ ಸಾವಿರಾರು ಭಕ್ತರ ಶ್ರದ್ದಾಭಕ್ತಿ ಪೂರ್ವಕವಾದ ಹರಹರ ಶಂಕರ ಎಂಬ ಘೋಷದೊಂದಿಗೆ ಗುರುವಾರ ಮಧ್ಯಾಹ್ನ ೧೨:೦೫ ರ ಅಭಿಜಿತ್ ಲಗ್ನ ಸುಮೂರ್ತದಲ್ಲಿ ಜರಗಿತು.
