ಮಳಲಿ ಮಟ್ಟಿ ಜೋಗಿಮಠದ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಳದಲ್ಲಿ ಜೀರ್ಣೋದ್ಧಾರ ಕಾರ್ಯಗಳಿಗೆ ಶಿಲಾನ್ಯಾಸ
ನಮ್ಮೆಲ್ಲರ ಮೇಲೆ ಭಗವಂತನ ಋಣವಿದೆ : ಸುದರ್ಶನ ಮೂಡಬಿದ್ರೆ
ಕೈಕಂಬ: ಭಗವಂತನ ಋಣದಲ್ಲಿರುವ ನಾವೆಲ್ಲ ನಿಮಿತ್ತ ಮಾತ್ರ. ಇಲ್ಲಿಗೆ ಬರುವಾಗ ನಾವು ಏನನ್ನೂ ತಂದಿಲ್ಲ ಅಥವಾ ಕೊಂಡೊಯ್ಯುವುದೂ ಇಲ್ಲ. ಪ್ರಕೃತಿಯಲ್ಲಿರುವ ಸೊತ್ತನ್ನೇ ಭಗವಂತನಿಗೆ ಅರ್ಪಿಸಿ ಧನ್ಯತಾ ಭಾವ ಕಂಡುಕೊಳ್ಳುವುದು ಧರ್ಮದ ಒಂದು ಭಾಗವಾಗಿದೆ. ಧಾರ್ಮಿಕತೆ ಮತ್ತು ಸಾಮರಸ್ಯದಿಂದ ಸಮಾಜದಲ್ಲಿ ಒಗ್ಗಟ್ಟು ಸಾಧ್ಯ ಎಂದರು.
ಅವರು ಆ. ೩೦ರಂದು ಭಾನುವಾರ ಮಳಲಿ ಮಟ್ಟಿಯ ಜೋಗಿಮಠದ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದ ಶಿಲಾನ್ಯಾಸ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ ಮುಂದಿನ ವರ್ಷ ಫೆಬ್ರವರಿ ಮಧ್ಯಭಾಗದಲ್ಲಿ ನಡೆಯಲಿರುವ ಅಷ್ಟಬಂಧ ಪುನರ್ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ನಡೆಯಲಿರುವ ಜೀರ್ಣೋದ್ಧಾರ ಕಾರ್ಯಗಳಿಗೆ ಸಮಾಜದ ಭಗವತ್ ಭಕ್ತರು ಕೈ ಜೋಡಿಸಲು ಕರೆನೀಡಿದರು.
ದೇರೆಬೈಲು ವಿಠಲದಾಸ ತಂತ್ರಿಯವರ ಪೌರೋಹಿತ್ಯ ಹಾಗೂ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಹಾಗೂ ಆಡಳಿತ ಸಮಿತಿ ಅಧ್ಯಕ್ಷ ಉಮೇಶನಾಥ ಕದ್ರಿ ಅವರ ಉಪಸ್ಥಿತಿಯಲ್ಲಿ ಪೂಜಾ ವಿಧಿ-ವಿಧಾನದೊಂದಿಗೆ ಶಿಲಾನ್ಯಾಸ ಕಾರ್ಯ ನೆರವೇರಿತು. ದೇರೆಬೈಲು ವಿಠಲದಾಸ ತಂತ್ರಿ ಅವರು ಆಶೀರ್ವಚನ ನೀಡುತ್ತ, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಲ್ಲಿ ಊರವರ ಸಹಕಾರ ಅತ್ಯಗತ್ಯ. ಎಲ್ಲರೂ ಕೈಜೋಡಿಸಿದರೆ ಈ ಕಾರ್ಯ ಕ್ಷಿಪ್ರ ಗತಿಯಲ್ಲಿ ಪೂರ್ಣಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಎಲ್ಲರೂ ಸೇರಿಕೊಂಡು ಒಂದೇ ಮನಸ್ಸಿನಿಂದ ಮಾಡುವ ಕೆಲಸಕ್ಕೆ ದೇವರ ಆಶೀರ್ವಾದ ಇದ್ದೇ ಇರುತ್ತದೆ ಎಂದರು.
ದೇರೆಬೈಲು ವಿಠಲದಾಸ ತಂತ್ರಿಯವರ ಪೌರೋಹಿತ್ಯ ಹಾಗೂ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಹಾಗೂ ಆಡಳಿತ ಸಮಿತಿ ಅಧ್ಯಕ್ಷ ಉಮೇಶನಾಥ ಕದ್ರಿ ಅವರ ಉಪಸ್ಥಿತಿಯಲ್ಲಿ ಪೂಜಾ ವಿಧಿ-ವಿಧಾನದೊಂದಿಗೆ ಶಿಲಾನ್ಯಾಸ ಕಾರ್ಯ ನೆರವೇರಿತು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮೊಕ್ತೇಸರ ಗಂಗಾಧರ ಜೋಗಿ ಮಾತನಾಡಿ ಮೊಗರು, ತೆಂಕುಳಿಪಾಡಿ ಮತ್ತು ಬಡಗುಳಿಪಾಡಿ ಗ್ರಾಮಗಳ ವ್ಯಾಪ್ತಿಯ ಭಕ್ತರು ಹಾಗೂ ಊರ-ಪರವೂರ ಭಕ್ತ-ಮಹನೀಯರ ಸಹಕಾರ ಮುಂದಿಟ್ಟುಕೊAಡು ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಕೈಹಾಕಿದ್ದೇವೆ.
ಮುಂದಿನ ೫ ತಿಂಗಳೊಳಗೆ ದೇವಸ್ಥಾನದ ಆವರಣದಲ್ಲಿ ಅಂದಾಜು ೨ ಲಕ್ಷ ರೂ ವೆಚ್ಚದಲ್ಲಿ ಅಣ್ಣಪ್ಪ ಪಂಜುರ್ಲಿ ಮತ್ತು ಮಲರಾಯ ದೈವದ ಸಾನಿಧ್ಯ, ಗುಳಿಗನ ಕಟ್ಟೆ, ನಾಗನ ಸಾನಿಧ್ಯ, ಕೆರೆ ಅಭಿವೃದ್ಧಿ, ಆವರಣ ಗೋಡೆ, ಅರ್ಚಕರ ವಸತಿಗೃಹ, ಕಚೇರಿ, ಪಾಕಶಾಲೆ ಮತ್ತು ಸಭಾಭವನ ನಿರ್ಮಾಣಗೊಳ್ಳಲಿದೆ. ೨೦೨೪ರ ಫೆಬ್ರವರಿ ೧೮ರಿಂದ ೨೫ರವರೆಗೆ ಅಷ್ಟಬಂಧ ಪುನರ್ ಬ್ರಹ್ಮಕಲಶೋತ್ಸವ ನಡೆಸಲು ಸಂಕಲ್ಪಿಸಿದ್ದೇವೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇಖರ ಜೋಗಿ ಪ್ರಸ್ತಾವಿಸಿದರು. ಹಿರಿಯ ಧಾರ್ಮಿಕ ಧುರೀಣ ಹರಿರಾವ್ ಕೈಕಂಬ, ಸತ್ಯನಾರಾಯಣ ಉಪಾಧ್ಯಾಯ ಮಳಲಿ, ಉಮೇಶನಾಥ ಜೋಗಿ, ಉದ್ಯಮಿ ಸತೀಶ್ ಕುಮಾರ್ ಜೋಗಿ ಮಾಲೆಮಾರ್ ಧಾರ್ಮಿಕ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಗಂಜಿಮಠ ಪಂಚಾಯತ್ ಅಧ್ಯಕ್ಷೆ ಮಾಲತಿ ಎಂ, ಹರೀಶ್ ಕೆ.(ಅಧ್ಯಕ್ಷರು, ರ‍್ದಬ್ಬು ದೈವಸ್ಥಾನ ಕಂದಾವರ), ಕೇಶವ ಪೂಜಾರಿ ಮಟ್ಟಿ(ಅಧ್ಯಕ್ಷ, ಬಿಲ್ಲವ ಸಮಾಜ ಸೇವಾ ಸಂಘ(ರಿ) ಮಳಲಿ ವಲಯ), ಭೋಜ ಮೇಂಡ ಮಟ್ಟಿ, ಸುನಿಲ್ ಗಂಜಿಮಠ(ತಾಪA ಮಾಜಿ ಸದಸ್ಯ), ನೋಣಯ್ಯ ಕೋಟ್ಯಾನ್(ಗಂಜಿಮಠ ಪಂಚಾಯತ್ ಮಾಜಿ ಅಧ್ಯಕ್ಷ), ಗಣನಾಥ ಭಂಡಾರಿ ಮಟ್ಟಿ ಹೊಸಮನೆ, ಮಮತಾ ಕುಂದರ್, ದಯಾನಂದ ಕಾಜಿಲ, ವಿಶ್ವನಾಥ ಪೂಜಾರಿ, ಜಯರಾಮ ಶೆಟ್ಟಿ ವಿಜೇತ ಕೈಕಂಬ, ವಿನಯಕುಮಾರ್ ಮಟ್ಟಿ ಮೇಗಿನಮನೆ, ದಿನೇಶ್ ಶೆಟ್ಟಿ ಮಟ್ಟಿ, ಕುಮಾರಚಂದ್ರ ಶೆಟ್ಟಿ ಮಟ್ಟಿ, ಶಿಲ್ಪಿ ಮಂಜುನಾಥ, ಮೋಹನ್ ಜೋಗಿ ಮಟ್ಟಿ ಹಾಗೂ ಮೊಗರು, ತೆಂಕುಳಿಪಾಡಿ ಮತ್ತು ಬಡಗುಳಿಪಾಡಿ ಗ್ರಾಮಗಳ ನೂರಾರು ಭಕ್ತರು ಉಪಸ್ಥಿತರಿದ್ದರು. ಶಿಕ್ಷಕ ಜಯಕರ ಶೆಟ್ಟಿ ಕೈಕಂಬ ಸ್ವಾಗತಿಸಿದರು. ಸತೀಶ್ ಶೆಟ್ಟಿ ಕಂದಾವರ ನಿರೂಪಿಸಿದರೆ, ಜೀಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಮಟ್ಟಿ ವಂದಿಸಿದರು.