ಸೆ. ೩ಕ್ಕೆ ಪೆರಾರ-ಗಂಜಿಮಠ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಕೈಕಂಬ: ಪೆರಾರ-ಗಂಜಿಮಠದ ಬಿಲ್ಲವ ಸಮಾಜ ಸೇವಾ ಸಂಘ(ರಿ) ಇದರ ವತಿಯಿಂದ ಸೆ. ೩ರಂದು ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಸಭಾಭವನದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ ಆಚರಿಸಲಾಗುವುದು.

ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಾರಾಯಣ ಪೂಜಾರಿ ದೀಪ ಬೆಳಗಿಸಲಿದ್ದಾರೆ, ಬಿಲ್ಲವ ಸಮಾಜ ಸೇವಾ ಸಂಘ ಬಜ್ಪೆಯ ಅಧ್ಯಕ್ಷ ಶಿವರಾಮ ಪೂಜಾರಿ, ಗಂಜಿಮಠ ಪಂಚಾಯತ್ ಅಧ್ಯಕ್ಷೆ ಮಾಲತಿ, , ಗಂಜಿಮಠ ಪಂಚಾಯತ್ ಉಪಾಧ್ಯಾಕ್ಷ ಜಯಂತ ಪೂಜಾರಿ,ವಿನೋದ್ ಪೂಜಾರಿ ಕೈಕಂಬ, ವಕೀಲ ವಿನೋಧರ ಪೂಜಾರಿ, ಸಂಘದ ಗೌರವಾಧ್ಯಕ್ಷ ಕೃಷ್ಣ ಅಮೀನ್, ನಾಗೇಶ್ ಕೋಟ್ಯಾನ್ ಮಳಲಿ,ತನ್ಯಗುತ್ತು ಮೋನಪ್ಪ ಪೂಜಾರಿ , ಅಧ್ಯಕ್ಷ ಗಣೇಶ್ ಪೂಜಾರಿ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಸಂಜೆ ೩-೪ರವರೆಗೆ ಶ್ರೀ ಸುಬ್ರಹ್ಮಣ್ಯೇಶ್ವರ ನಾದಪ್ರಿಯ ತಂಡ ಗುರುಪುರ ಕೈಕಂಬ ಹಾಗೂ ಕಾಂತಬಾರೆ ಬುಧಬಾರೆ ಭಜನಾ ಮಂಡಳಿ ಕೊಳಂಬೆ ಇವರಿಂದ ಭಜನೆ ಹಾಗೂ ೪ ಗಂಟೆಗೆ ನಾರಾಯಣ ಗುರುಗಳ ಭಾವಚಿತ್ರಕ್ಕೆ ಹಾರಾರ್ಪಣೆ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಸುನಿಲ್ ಗಂಜಿಮಠ ತಿಳಿಸಿದ್ದಾರೆ.