ಶ್ರೀ ಸದ್ಗುರು ನಿತ್ಯಾನಂದ ಸ್ವಾಮಿ ಮಂದಿರದಲ್ಲಿ “ನವದಿನಗಳ ಭಜನಾ ಸಂಕೀರ್ತನ”ಗೆ ಚಾಲನೆ
ಬಂಟ್ವಾಳ: ಇಲ್ಲಿನ ಬೈಪಾಸ್ ಸಮೀಪದ ನಿತ್ಯಾನಂದ ನಗರದ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರದಲ್ಲಿ 11ನೇ ವಾರ್ಷಿಕ ಶ್ರಾವಣ ಮಾಸದ “ನವದಿನಗಳ ಭಜನಾ ಸಂಕೀರ್ತನ”ಕ್ಕೆ ಮಂಗಳವಾರ ಸಂಜೆ ಚಾಲನೆ ನೀಡಲಾಯಿತು.
ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ ನ ಅಧ್ಯಕ್ಷ ದಿನೇಶ್ ಭಂಡಾರಿ ಅವರು ದೀಪ ಪ್ರಜ್ವಲನೆಗೈದುಭಜನಾ ಸಂಕೀರ್ತನೆಗೆ ಚಾಲನೆ ನೀಡದರು.ಈ ಸಂದರ್ಭ ಟ್ರಸ್ಟಿಗಳಾದ ಸುರೇಶ್ ಕುಲಾಲ್, ಚೆನ್ನಕೇಶವ,ದಿನೇಶ್ ಕುಲಾಲ್, ಹರೀಶ್ ಎಂ.ಸುಕುಮಾರ್,ಪ್ರದೀಪ್ ಗಾಣಿಗ ಭಜಕವೃಂದದ ಗೋಪಾಲ್,ಯಶವಂತ ಮೊದಲಾದವರಿದ್ದರು.
ಪ್ರತಿದಿನ ಸಂಜೆ ಗಂಟೆ 6-30 ಶ್ರೀ ನಿತ್ಯಾನಂದ ,ಗೋವಿಂದ ಸ್ವಾಮೀಜಿಯವರಿಗೆ “ತುಪ್ಪದ ದೀಪವನ್ನು ಬೆಳಗಿ ಭಜನಾ ಸಂಕೀರ್ತನೆ ಆರಂಭವಾಗಲಿದೆ.ರಾತ್ರಿ ಪ್ರಧಾನ ಅರ್ಚಕರಾದ ಸತ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಮಹಾಪೂಜೆಯು ನೆರವೇರಿತು.
ಸಹಾಯಕ ಅರ್ಚಕ ರಘ ಸಹಕರಿಸಿದರು. ಬಳಿಕ ನವದಿನವು ಸಾರ್ವ ಜನಿಕ ಅನ್ನಸಂತರ್ಪಣೆಯು ನಡೆಯಲಿದೆ.ಆ.30 ರಂದು ಸಂಜೆ ಭಜನಾ ಮಂಗಲೋತ್ಸವ ನಡೆಯಲಿದ್ದು ಅಂದು ವಿವಿಧ ಭಜನಾ ತಂಡಗಳು ಭಾಗವಹಿಸಲಿದೆ.
ವರಮಹಾಲಕ್ಷೀ ವೃತ:
ಆ. 25 ರಂದು ಅಪರಾಹ್ನ 3 ರಿಂದ ಪೂಜೆ ಮಂದಿರದಲ್ಲಿ 18 ನೇ ವರ್ಷದ ಸಾಮೂಹಿಕ
“ಶ್ರೀ ವರಮಹಾಲಕ್ಷ್ಮೀ ಪೂಜಾ ವೃತ”ನಡೆಯಲಿದೆ.
ಹಾಗೆಯೇ ಸೆ.6 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 33ನೇ ವರ್ಷದ ಮೊಸರು ಕುಡಿಕೆ ಉತ್ಸವವು ಮಂದಿರದ ವಠಾರದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 9 ರಿಂದ ವಿವಿಧ ಆಟೋಟ ಸ್ಪರ್ಧೆಗಳು ಸಂಜೆ ಗಂಟೆ 5-00ಕ್ಕೆ : ಮಕ್ಕಳಿಗೆ ಭಕ್ತಿಗೀತೆ ಸ್ಪರ್ಧೆ ನಂತರ ಬಹುಮಾನ ವಿತರಣೆ. ರಾತ್ರಿ ಗಂಟೆ 8-00ರಿಂದ 12-00ರ ತನಕ : ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ದಿನೇಶ್ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.