ಪೊಳಲಿ ವಿ.ಎಸ್. ಎಸ್. ಸಂಘಕ್ಕೆ ಪ್ರಶಸ್ತಿ
ಪೊಳಲಿ: ೨೦೨೨-೨೩ ನೇ ಸಾಲಿನಲ್ಲಿ ಪೊಳಲಿ ಸಹಕಾರಿ ವ್ಯವಸಾಯ ಸೇವಾ ಸಹಕಾರಿ ಸಂಘವು ತನ್ನ ಕಾರ್ಯ ವ್ಯಾಪ್ತಿಯಲ್ಲಿ ಸಾಧಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಬ್ಯಾಂಕ್ ನ ೨೦೨೨-೨೩ ನೇ ಸಾಲಿನ ಬ್ಯಾಂಕ್ ನ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯರವಿ ಪೆರ್ನಾಂಡಿಸ್ ಅವರನ್ನು ಗೌರವಿಸಲಾಯಿತು.
ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ. ಏನ್. ರಾಜೇಂದ್ರಕುಮಾರ್ ಹಾಗೂ ನಿರ್ದೇಶಕರಾದ ಟಿ. ರಾಜರಾಮ್ ಭಟ್ ಸಹಿತ ಮತ್ತಿತರರು ಉಪಸ್ಥಿತರಿದ್ದರು.