ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಹಿ.ಜಾ.ವೇ.ಯಿಂದ ಪ್ರತಿಭಟನೆ
ಬಂಟ್ವಾಳ: ಗೌರಿಬಿದನೂರಿನಲ್ಲಿ ಅಖಂಡ ಸಂಕಲ್ಪ ದಿನದಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯತೆಯ ಭಾಷಣಗೈದ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೊಜಕ್ ಸತೀಶ್ ದಾವಣಗೆರೆ ಬಂಧಿಸಿದ ಪೋಲೀಸ್ ಇಲಾಖೆಯ ನಡೆ ಹಾಗೂ ರಾಜ್ಯ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಹಿಂದು ಜಾಗರಣ ವೇದಿಕೆಯ ಮಂಗಳೂರು ಜಿಲ್ಲೆ ವತಿಯಿಂದ ಬಿ.ಸಿ.ರೋಡಿನ ಖಾಸಗಿ ಬಸ್ಸು ನಿಲ್ದಾಣದ ಬಳಿ ಸೋಮವಾರ ಸಂಜೆ ಪ್ರತಿಭಟನೆ ನಡೆಯಿತು.
ಈ ಸಂಧರ್ಭದಲ್ಲಿ ಹಿಂ.ಜಾ ವೇ ಜಿಲ್ಲಾ ಸಂಯೋಜಕರಾದ ನರಸಿಂಹ ಮಾಣಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದೂ ಸಂಘಟನೆಯ ಪ್ರಮುಖರು,ಕಾರ್ಯಕರ್ತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು,ಇದನ್ನು ಹಿಂದೂ ಸಮಾಜ ಸಹಿಸದು,ಇದೇರೀತಿ ಮುಂದುವರಿದಲ್ಲಿ ತೀವ್ರ ಸ್ವರೂಪದ ಹೋರಾಟಕ್ಕು ಸಿದ್ದರಿದ್ದು,ವಿಟ್ಲ ಭಾಗದ ಗಡಿ ಪ್ರದೇಶದಲ್ಲು ಅಕ್ರಮ ಜಾನುವಾರು ಸಾಗಾಟ ಸಹಿತ ಕಾನೂನು ಬಾಹಿರ ಚಟುವಟಿಕೆಗಳು ನಡೆಯಿತ್ತಿದ್ದು,ಇದನ್ನು ಪೊಲೀಸ್ ಇಲಾಖೆ ತಡೆಯಬೇಕು ಎಂದು ಆಗ್ರಹಿಸಿದರು.
ಹಿ.ಜಾ.ವೇ. ಪ್ರಮುಖರಾದ ರವಿರಾಜ್ ಬಿ.ಸಿ.ರೋಡು, ಮಂಗಳೂರು ಮಹಾನಗರ ಜಿಲ್ಲಾ ಮತ್ತು ಗ್ರಾಮಾಂತರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ, ಜಿಲ್ಲಾ ಪ್ರಮುಖರಾದ ಸಮಿತ್ ರಾಜ್ ದರೆಗುದ್ದೆ, ಪ್ರಕಾಶ್ ಕುಂಪಲ, ಅರುಣ್ ಸಜೀಪ, ಗಣೇಶ್ ಕೆದಿಲ, ಬಾಲಕೃಷ್ಣ ಕಲಾಯಿ, ರವಿ ಕೆಂಪು ಗುಡ್ಡೆ, ಬಿಜೆಪಿ ಮುಖಂಡರಾದ ರಾಮದಾಸ್ ಬಂಟ್ವಾಳ,ಕೇಶವ ದೈಪಲ ತಾಲೂಕು ಕಾರ್ಯಕರ್ತರು ಮತ್ತು ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.