ಬಂಟ್ವಾಳ: ಹೋಟೆಲ್ ಮಾಲಕರ ಎಸೋಸಿಯೇಶನ್ ಅಸ್ವಿತ್ವಕ್ಕೆ
ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಹೋಟೆಲ್ ಮಾಲಕರ ಎಸೋಸಿಯೇಶನ್ ಅಸ್ವಿತ್ವಕ್ಕೆ ಬಂದಿದ್ದು, ಸ್ಥಾಪಕಾಧ್ಯಕ್ಷರಾಗಿ ರಂಗೋಲಿ ಹೋಟೆಲ್ ಮಾಲಕ ಚಂದ್ರಹಾಸ ಶೆಟ್ಟಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಬಸ್ತಿಕೋಡಿ, ಉಪಾಧ್ಯಕ್ಷರಾಗಿ ನಾರಾಯಣ ಸಿ ಪೆರ್ನೆ ಆಯ್ಕೆಯಾಗಿದ್ದಾರೆ.ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ರೈ, ಕೋಶಾಧಿಕಾರಿಯಾಗಿ ಬಿ ಧರ್ಮೇಂದ್ರ ಬಂಟ್ವಾಳ ಹಾಗೂ ವಲಯ ಸಂಚಾಲಕರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಒಟ್ಟು 27 ಮಂದಿಯನ್ನು ಆಯ್ಕೆಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.