ಮಜಿ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಂಘದ ಉದ್ಘಾಟನೆ
ಬಂಟ್ವಾಳ: ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ತಮ್ಮ ಸೃಜನಶೀಲತೆ ವ್ಯಕ್ತಪಡಿಸುವ ಗುಣ ಎಳವೆಯಲ್ಲೇ ಹೊರಹೊಮ್ಮಿದಾಗ ಕೇವಲ ಶಾಲೆಗಳಲ್ಲಿ ಸಾಹಿತ್ಯದ ಚಟುವಟಿಕೆಗಳು ಮಾತ್ರ ಅಲ್ಲದೇ ವೈಯಕ್ತಿಕವಾಗಿ ಸಾಹಿತ್ಯದಲ್ಲಿ ಪ್ರಗತಿಗೆ ಕಾರಣಗಳಾಗುತ್ತವೆ, ಪ್ರಾಥಮಿಕ ಶಾಲಾ ಹಂತದಲ್ಲಿ ಸಾಹಿತ್ಯ ಸಂಘಗಳು ಉತ್ತಮ ಪ್ರೇರಣೆಯನ್ನು ನೀಡುತ್ತವೆ ಎಂದು ಮಕ್ಕಳ ಕಲಾ ಲೋಕದ ಗೌರವ ಸಲಹೆಗಾರರು, ನಿವೃತ್ತ ಶಿಕ್ಷಕರಾದ ಭಾಸ್ಕರ ಅಡ್ವಾಳ ರವರು ಹೇಳಿದ್ದಾರೆ.

ಬಂಟ್ವಾಳ ತಾ.ನ ವೀರಕಂಬಗ್ರಾಮದ ಮಜಿ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಂಘ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ ಸಿಂಗೇರಿ ಸಭಾಧ್ಯಕ್ಚತೆ ವಹಿಸಿದ್ದರು. ಶಾಲಾ ನಾಯಕಿ ತೃಷಾ, ಉಪನಾಯಕ ಶಿಹಾನ್ ವೇದಿಕೆಯಲ್ಲಿದ್ದರು.

ಮುಖ್ಯ ಶಿಕ್ಷಕಿ ಶ್ರೀಮತಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ಚುಟುಕು, ಕವನ, ಕಥೆ ರಚನೆ ಮುಂತಾಗಿ ತಮ್ಮ ಭಾವನೆ, ಕಲ್ಪನೆ ಗಳನ್ನು ಪದಗಳ ಮೂಲಕ ಹೇಗೆ ವ್ಯಕ್ತ ಪಡಿಸುವುದೆಂದು ಚಟುವಟಿಕೆಗಳ ಮೂಲಕ ತಿಳಿಸಿದರು.