Published On: Sat, Aug 19th, 2023

ಯಕ್ಷಗಾನ ಒಂದು ಶ್ರೇಷ್ಠ ಕಲೆ: ಪಟ್ಲಸತೀಶ್ ಶೆಟ್ಟಿ

ಬಂಟ್ವಾಳ: ಯಕ್ಷಗಾನ ಒಂದು ಶ್ರೇಷ್ಠ ಕಲೆ ,  ಎಲ್ಲಾ ಪ್ರಕಾರದ ಕಲೆಗಳ ಸಮ್ಮಿಲನವಾದ ಯಕ್ಷಗಾನವಿಂದು ಜಾಗತಿಕ ಕಲೆಯಾಗಿ ಮೇಳೈಸುತ್ತಿದೆ ಎಂದು  ಯಕ್ಷಧ್ರುವ ಪಟ್ಲ  ಫೌಂಡೇಷನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಹೇಳಿದ್ದಾರೆ.ಶನಿವಾರ ಫರಂಗಿಪೇಟೆ ಶ್ರೀ ರಾಮ ಪ್ರೌಢ ಶಾಲೆಯಲ್ಲಿ ಯಕ್ಷ ದ್ರುವ – ಯಕ್ಷ ಶಿಕ್ಷಣ ನಾಟ್ಯ ತರಬೇತಿ  ಶಿಕ್ಷಣ ಅಭಿಯಾನದಡಿ   ಆರಂಭವಾದ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಫರಂಗಿಪೇಟೆ ಶ್ರೀ ರಾಮ ಪ್ರೌಢ ಶಾಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು   ಈ ತರಗತಿಯಲ್ಲಿ ಭಾಗವಹಿಸಿದರು.

ಶ್ರೀ ರಾಮ ವಿದ್ಯಾ ಸಂಸ್ಥೆಯ ಆಡಳಿತ  ಮಂಡಳಿ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎ.ಕೆ ಜಯರಾಮ ಶೇಕ , ನಿವೃತ್ತ ಮುಖ್ಯ ಶಿಕ್ಷಕರಾದ  ದೇವದಾಸ್ ಕೆ. ಆರ್ , ರೋಟರಿ ಕ್ಲಬ್ ಫರಂಗಿಪೇಟೆಯ ಕೋಶಾಧಿಕಾರಿ ದಿನೇಶ್ ಶೆಟ್ಟಿ ಕೊಟ್ಟಿಂಜ , ಯಕ್ಷ ದ್ರುವ – ಯಕ್ಷ ಶಿಕ್ಷಣದ ಶಿಕ್ಷಕರಾದ ಅನ್ವೇಶ್ ಶೆಟ್ಟಿ,  ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೈಲಜಾ , ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಯ ಕುಮಾರ್  ಉಪಸ್ಥಿತರಿದ್ದರು 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter