ಬಂಟ್ವಾಳ: ಸಂಭ್ರಮದ ನಾಗರಪಂಚಮಿ
ಬಂಟ್ವಾಳ:ತಾಲ್ಲೂಕಿನ ವಿವಿಧ ನಾಗಬನ ಮತ್ತು ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ನಾಗರ ಪಂಚಮಿ ಪ್ರಯುಕ್ತ ಸೋಮವಾರ ನಾಗನಿಗೆ ಹಾಲು ಮತ್ತು ಸೀಯಾಳ ಅಭಿಷೇಕ ಸಹಿತ ವಿಶೇಷ ಪೂಜೆ ಸಲ್ಲಿಸಲಾಯಿತು.
![](https://www.suddi9.com/wp-content/uploads/2023/08/21btl-Naga-2-650x340.jpg)
ಇಲ್ಲಿನ ಸಜಿಪನಡು ಮತ್ತು ಶಂಭೂರು ಶಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಹಿತ ರಾಯಿ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯ ದೇವಸ್ಥಾನ, ಸಜಿಪಮೂಡ ಸುಬ್ರಹ್ಮಣ್ಯ ದೇವಸ್ಥಾನ, ಬಿ.ಸಿ.ರೋಡು ಅನ್ನಪೂರ್ಣೇಶ್ವರಿ, ಚಂಡಿಕಾಪರಮೇಶ್ವರಿ ಮತ್ತು ರಕ್ತೇಶ್ವರಿ ದೇವಸ್ಥಾನದ ನಾಗಸನ್ನಿಧಿ ಸೇರಿದಂತೆ ವಿವಿಧ ನಾಗಬನಗಳಲ್ಲಿ ನಾಗನ ವಿಗ್ರಹಕ್ಕೆ ಕೆಂದಾಳೆ ಸೀಯಾಳ ಮತ್ತು ಹಾಲಿನ ಅಭಿಷೇಕ ಸಹಿತ ಪಂಚಾಮೃತ ಅಭಿಷೇಕ ನಡೆಯಿತು. ಭಕ್ತರು ಕೇದಗೆ, ಸಂಪಿಗೆ ಮತ್ತಿತರ ಹೂವು ಸಮರ್ಪಿಸಿ ನಾಗತಂಬಿಲ ಮತ್ತಿತರ ವಿಸೇಷ ಪೂಜೆ ಸಲ್ಲಿಸಿದರು.