ಕರಂಬಾರಿನಲ್ಲಿ ಕೆಸರ್‌ಡ್ ಒಂಜಿ ದಿನ’
ಕೈಕಂಬ : ಕೆಂಜಾರು-ಕರAಬಾರಿನ ಶ್ರೀ ದೇವಿ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್(ರಿ) ಇದರ ವತಿಯಿಂದ ಆ. ೧೩ರಂದು ಕರಂಬಾರಿನ ಶ್ರೀ ಕರ‍್ದಬ್ಬು ದೈವಸ್ಥಾನದ ಎದುರು ಗದ್ದೆಯಲ್ಲಿ ಆಯೋಜಿಸಲಾದ
ಕೆಸರ್‌ಡ್ ಒಂಜಿ ದಿನ’ ಕಾರ್ಯಕ್ರಮವನ್ನು ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಕಳಸೆಯಲ್ಲಿದ್ದ ತೆಂಗಿನ ಕೊಂಬು(ಹೂ) ಅರಳಿಸಿ, ತುಳುನಾಡ ವಿಶಿಷ್ಟ ಸಂಪ್ರದಾಯದAತೆ ವ್ಯವಸ್ಥೆಗೊಳಿಸಲಾದ ದೀಪ ಬೆಳಗಿಸಿ ಮೂಲಕ ಉದ್ಘಾಟಿಸಿದರು.
ಕರಂಬಾರು ಪಡುಮನೆ ರತ್ನಾ ಲಕ್ಕಪ್ಪ ಶೆಟ್ಟಿ ವೇದಿಕೆಯಲ್ಲಿ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿ, ಯುವ ಪೀಳಿಗೆಗೆ ತುಳುನಾಡ ಸಂಪ್ರದಾಯ ತಿಳಿಸಿ ಕೊಡುವ ಈ ಪ್ರಯತ್ನ ಸ್ವಾಗತಾರ್ಹ. ತುಳು ಭಾಷೆ ಚೆಂದ, ಕೆಸರಿನಲ್ಲಿ ಆಟ ಇನ್ನೂ ಚೆಂದ. ತುಳುನಾಡಲ್ಲಿ ಕೃಷಿಗೆ ಆದ್ಯತೆ ಹೆಚ್ಚಲಿ ಎಂದು ಹಾರೈಸಿದರು.
ಊರಿನ ಪರವಾಗಿ ವೇಣುಗೋಪಾಲ ಶೆಟ್ಟಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕ್ಲಬ್‌ನ ಅಧ್ಯಕ್ಷ ರವಿ ಶೆಟ್ಟಿ ಕೆಂಜಾರು, ಪದಾಧಿಕಾರಿಗಳು, ಸದಸ್ಯರು, ಭಂಡಾರದ ಮನೆಯ ಜೀವನ್(ಮಂಜು ಪೂಜಾರಿ), ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಜಗನ್ನಾಥ ಸಾಲ್ಯಾನ್(ಅಧ್ಯಕ್ಷ, ಶ್ರೀ ಮಾರಿಯಮ್ಮ ಕೋಟೆ ಬಬ್ಬು ದೈವಸ್ಥಾನ ಕರಂಬಾರು), ಶೇಖರ ಬಂಗೇರ(ಅಧ್ಯಕ್ಷ, ಶ್ರೀ ದೇವಿ ಭಜನಾ ಮಂದಿರ ಕೆಂಜಾರು-ಕರAಬಾರು), ಮಹಾಬಲ ಪೂಜಾರಿ(ಅಧ್ಯಕ್ಷ, ಶ್ರೀ ರಾಮಾಂಜನೇಯ ದೇವಸ್ಥಾನ ಕೆಂಜಾರು), ಸಹಕಾರ ರತ್ನ' ಚಿತ್ತರಂಜನ್ ಬೋಳಾರ್, ಲಕ್ಷö್ಮಣ್ ಬಂಗೇರ(ಅಧ್ಯಕ್ಷ, ಮಹಾಲಕ್ಷಿö್ಮÃ ದೇವಸ್ಥಾನ ಕರಂಬಾರು), ಕರಂಬಾರು ರಮೇಶ್ ಪೂಜಾರಿ, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ದಿವಾಕರ ಪಾಂಡೇಶ್ವರ, ಹರಿಶ್ಚಂದ್ರ, ಕೆ. ಕೆ. ಪೇಜಾವರ, ಗಣೇಶ್ ಅರ್ಬಿ, ಸತ್ಯಜೀತ್ ಸುರತ್ಕಲ್ ಮತ್ತಿತರ ಗಣ್ಯರು ಆಗಮಿಸಿದ್ದರು. ರಾಜೇಂದ್ರ ಎಕ್ಕಾರು ಸ್ವಾಗತಿಸಿದರು. ಸಂಜೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನಡೆಯಿತು.
ಕೆಸರ್‌ಡ್ ಒಂಜಿ ದಿನ : ಊರಿನವರು ಶ್ರೀ ದೇವಿ ಭಜನಾ ಮಂದಿರದಿAದ ಕೆಸರು ಗದ್ದೆಗೆ ಭಜನೆಯ ಭವ್ಯ ಮೆರವಣಿಗೆಯಲ್ಲಿ ಆಗಮಿಸಿದರು. ಕರ‍್ದಬ್ಬು ದೈವಸ್ಥಾನದ ಎದುರಿನ ವಿಶಾಲ ಗದ್ದೆಯಲ್ಲಿ ವ್ಯವಸ್ಥೆಗೊಳಿಸಲಾದ
ಕೆಸರ್‌ಡ್ ಒಂಜಿ ದಿನ’ ಕಾರ್ಯಕ್ರಮಕ್ಕೆ ನೂರಾರು ಮಂದಿ ಸಾಕ್ಷಿಯಾಗಿದ್ದರು. ಮಹಿಳೆಯರು, ಮಕ್ಕಳು, ಯುವಕರಿಂದ ಕೆಸರು ಗದ್ದೆಯಲ್ಲಿ ಓಟ, ನಿಧಿ ಶೋಧ, ತಪ್ಪಂಗಾಯಿ, ಹಿಮ್ಮುಖ ಓಟ, ಮಡಕೆ ಒಡೆಯುವುದು, ತುಳು ಜಾನಪದ ಹಾಡಿಗೆ ಸಮೂಹ ನೃತ್ಯ… ಹೀಗೆ ತುಳುನಾಡ ಸೊಗಡಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೊರೊನಾ ವೇಳೆ ಸಹಕರಿಸಿದ ಆಶಾ ಮತ್ತು ಆರೋಗ್ಯ ಕಾರ್ಯಕರ್ತರನ್ನು ಗೌರವಿಸಲಾಯಿತು. ಕ್ರೀಡೆಯಲ್ಲಿ ಪದಕ ಗಳಿಸಿದ ಕ್ರೀಡಾಪಟುಗಳು ಮತ್ತು ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು. ಕೆಂಜಾರು-ಕರAಬಾರಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು.