ಮೂಡುಶೆಡ್ಡೆ ಶಾರದಾ ಶುಬೋಧಯ ವಿದ್ಯಾಲಯದಲ್ಲಿ ೧೭೭ ನೇ ಸ್ವಾತಂತ್ರೋತ್ಸವ
ವಾಮಂಜೂರು: ಮೂಡುಶೆಡ್ಡೆ ಶಾರದಾ ಶುಬೋಧಯ ವಿದ್ಯಾಲಯದಲ್ಲಿ ಆ.೧೫ರಂದು ಸ್ವಾತಂತ್ರ‍್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ವಿನೂತನ ಶೈಲಿಯಲ್ಲಿ ಆಚರಿಸಲಿಕ್ಕಿದ್ದೇವೆ ಎಂದು ಶಾರದಾ ಶುಬೋಧಯದ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಶಾರದಾ ಅಂಧರ ಗೀತಾ ಗಾಯನ ಸಂಸ್ಥೆಯ ಗಾಯಕರು ಬಹಳ ಸಂದಿಗ್ದ ಪರಿಸ್ಥಿತಿಯನ್ನು ಎದುರಿಸಿತ್ತಿದ್ದು ಅಂದಕಲಾವಿದರನ್ನು ಪ್ರೋತ್ಶಹಿಸುವ ಸಲುವಾಗಿ ಶಾರದಾ ಶುಭೋಧಯದ ವಿದ್ಯಾರ್ಥಿಗಳು ಶಾರದಾ ಅಂಧರ ಗೀತಾ ಗಾಯನದ ಸಂಗೀತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಹಿರಿಯ ಪ್ರಗತಿಪರ ಕೃಷಿಕ ರಮಾನಂದ ಅತ್ತಾರ್, ನಿವೃತ ಸೇನಾಧಿಕಾರಿ ಎ. ಕೆ. ಭರತ್ ಕುಮಾರ್ ಇವರನ್ನು ಶಾರದಾ ಶುಭೋದಯದ ವಿದ್ಯಾಲಯದಲ್ಲಿ ಸನ್ಮಾನಿಸಲಿದ್ದಾರೆ.
ಕಷ್ಟದಲ್ಲಿರುವ ಅಂಧಕಲಾವಿದರನ್ನು ಗುರುತಿಸಿ ವೇದಿಕೆ ನೀಡಿ ಸಹಾಯ ಹಸ್ತವನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡ ಶಾರದಾ ಶುಬೋಧಯದ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಲಿದೆ.