ಶ್ರೀ ನಿತ್ಯಾನಂದರ ಬಂಟ್ವಾಳ ಭೇಟಿಗೆ ಶತಮಾನೋತ್ಸವ :ಮಂದಿರದಲ್ಲಿಶತ ಸಂಭ್ರಮ
ಬಂಟ್ವಾಳ: ಅವಧೂತ ಭಗವಾನ್ ಶ್ರೀ ನಿತ್ಯಾನಂದರ ಬಂಟ್ವಾಳ ಭೇಟಿಗೆ ಶತಮಾನೋತ್ಸವ ಪೂರೈಸಿರುವ ಹಿನ್ನಲೆಯಲ್ಲಿ ಬಂಟ್ವಾಳ ಬೈಪಾಸ್ ನಲ್ಲಿರುವ ನಿತ್ಯಾನಂದ ನಗರ ಶ್ರೀ ಸದ್ಗುರು ನಿತ್ಯಾನಂದ,ಗೋವಿಂದ ಸ್ವಾಮಿ ಮಂದಿರದಲ್ಲಿ ಭಾನುವಾರ ಶತ ಸಂಭ್ರಮ ಕಾರ್ಯಕ್ರಮವು ವಿಜೃಂಭಣೆಯಿಂದ ಜರಗಿತು.
ಈ ಸಂದರ್ಭಾ ನಿತ್ಯಾನಂದರ ಸ್ಮರಣೆ ಮತ್ತು ಪ್ರೇರಣೆ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸಗೈದ ಪತ್ರಕರ್ತ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಅವರು ಭಗವಾನ್ ನಿತ್ಯಾನಂದರು ಭಕ್ತರ ಕುರಿತಾಗಿ ಅಪಾರವಾದ ಕಾಳಜಿ ಹೊಂದಿದ್ದು,ಕೋಟ್ಯಾಂತರ ಭಕ್ತರನ್ನು ಹರಸಿದ್ದರು ಎಂದು ಹೇಳಿದರು. ಬಂಟ್ವಾಳಕ್ಕೆ ಪಾದಸ್ಪರ್ಶ ಗೈದಿದ್ದ ನಿತ್ಯಾನಂದರು ಇಲ್ಲು ತಮ್ಮ ಅನೇಕ ಲೀಲೆಗಳನ್ನು ತೋರಿಸಿದ್ದನ್ನು ಅವರು ಸ್ಮರಿಸಿದರು.
ಪ್ರವೀಣ್ ಜ್ಯೋತಿಷಿ,ಆಡಳಿತ ಸಮಿತಿ ಅಧ್ಯಕ್ಷ ದಿನೇಶ್ ಭಂಡಾರಿ ವೇದಿಕೆಯಲ್ಲಿದ್ದರು.
ಬೆಳಗ್ಗೆ ನಿತ್ಯ ಪೂಜೆ, ಭಜನಾ ಕಾರ್ಯಕ್ರಮ ಜರಗಿತು.ಮಧ್ಯಾಹ್ನ ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ , ಅನ್ನಸಂತರ್ಪಣೆ ನಡೆಯಿತು.
ಈ ಪ್ರಯುಕ್ತ ಬೆಳಿಗ್ಗೆಯಿಂದ ರಾತ್ರಿವರೆಗೆ ಭಕ್ತಾದಿಗಳಿಗೆ ಶ್ರೀ ದೇವರ ಗರ್ಭಗುಡಿಗೆಪ್ರವೇಶವನ್ನು ಕಲ್ಪಿಸಲಾಯಿತು.
ಮಂದಿರದ ಟ್ರಸ್ಟಿಗಳಾದ ಸುರೇಶ್ ಕುಲಾಲ್,ಸುಕುಮಾರ್,ಹರೀಶ್ ಎಂ.,ದೇವಕಿ,ಪ್ರದಿಒಪ್ ಗಾಣಿಗ,ಅಶೋಕ್ ಕುಲಾಲ್,ಬೇಬಿಪೂಜಾರಿ,ದಿನೇಶ್ ಕೆ.,ಹರೀಶ್ ಶೆಟ್ಟಿ, ಹಾಗೂ ಗೋಪಾಲ ಭಂಡಾರಿಬೆಟ್ಟು,ಯಶವಂತ ಮೊದಲಾದವರಿದ್ದರು ಟ್ರಸ್ಟಿ ಚೆನ್ನಕೇಶವ ಸ್ವಾಗತಿಸಿ,ವಂದಿಸಿದರು.
ಶ್ರೀ ನಿತ್ಯಾನಂದ ಸ್ವಾಮೀಜಿಯವರು ಬಂಟ್ಚಾಳಕ್ಕೆ ಪಾದಾರ್ಪಣೆಗೈದು ನೂರು ವರ್ಷ ಪೂರೈಸುತ್ತಿದ್ದು,ಲೋಕಸಂಚಾರ ದ ಕಾಲಘಟ್ಟದಲ್ಲಿ ಅಂದರೆ1923 ರ ಆಗಸ್ಟ್ ಮೊದಲವಾರ ಬಂಟ್ವಾಳ ಎಂಬ ಪುಟ್ಟ ಊರಿಗೆ ಪಾದಸ್ಪರ್ಶ ಗೈದಿದ್ದರು.
ಬಂಟ್ವಾಳದಲ್ಲಿ ಹರಿಯುವ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ತೀರ,ಬೈಪಾಸ್ ನಲ್ಲಿರುವ ನಿತ್ಯಾನಂದ ನಗರದಲ್ಲಿ ಬಂದು ಧ್ಯಾನ,ತಪಸ್ಸಿನಲ್ಲಿ ತಲ್ಲೀನರಾಗುತ್ತಿದ್ದರು ಎಂಬ ಪ್ರತೀತಿ ಇದೆ.ಶ್ರೀ ನಿತ್ಯನಂದರು ಆಗ ಧ್ಯಾನಸ್ಥರಾಗಿದ್ದ ಪ್ರದೇಶವೀಗ ನಿತ್ಯನಂದ ನಗರ ಎಂದೇ ನಾಮಕರಣವಾಗಿದ್ದು,ಇಲ್ಲಿ ಶ್ರೀ ನಿತ್ಯಾನಂದ ಹಾಗೂ ಅವರ ಶಿಷ್ಯ ಶ್ರೀಗೋವಿಂದ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆಯನ್ನೊಳಗೊಂಡು ಸುಂದರ ಮಂದಿರವು ನಿರ್ಮಾಣವಾಗಿದೆ.
ನಿತ್ಯಾನಂದರು ಬಂಟ್ವಾಳಕ್ಕೆ ಬಂದಿದ್ದಾಗ ಇಲ್ಲಿ ಕೆಲವರು ಪೀಡಿಸಿದ ಪರಿಣಾಮ1923 ರ ಅಗಸ್ಟ್ 7 ಮತ್ತು 8 ರಂದು”ಮಾರಿ ಬೊಳ್ಳ” ಬಂದಿರುವುದನ್ನು ಸ್ಮರಿಸಬಹುದು.