Published On: Sun, Aug 6th, 2023

ಮುದಲ್ಮೆಯಲ್ಲಿ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮ

ಬಂಟ್ವಾಳ: ಆಶೀರ್ವಾದ್ ಸೇವಾ ಸಂಘ ಹಾಗೂ ಆಶೀರ್ವಾದ ಮಹಿಳಾ ಸೇವಾ ಸಂಘ ತುಂಬೆ ಇದರ ಆಶ್ರಯದಲ್ಲಿ ಮುದಲ್ಮೆಯಲ್ಲಿ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮ ಭಾನುವಾರ ವಿಜ್ರಂಭನೆಯಿಂದ ನಡೆಯಿತು.

ಸಂಘದ ಕಚೇರಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯ ಡಾ. ಕಿರಣ್ ಶೆಟ್ಟಿಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಮಾತನಾಡಿ ಊರಿನ ಎಲ್ಲರನ್ನು ಸೇರಿಸಿಕೊಂಡು ಮಾಡುವ ಈ ಕಾರ್ಯಕ್ರಮದ ಮೂಲಕ ತುಳುನಾಡಿನ ಸಂಸ್ಕೃತಿ, ಸಂಸ್ಕಾರ ಉಳಿದು ಬರಲಿದೆ ಎಂದರು.

ಹಿಂದೆ  ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ಕೃಷಿ ಕಾರ್ಯ ನಡೆಸಿ ವಿಶ್ರಾಂತಿ ಪಡೆಯುವ ತಿಂಗಳಾಗಿದ್ದು  ತುಂಬಾ ಕಷ್ಟದ ದಿನಗಳನ್ನು ನಮ್ಮ ಹಿರಿಯರು ಅನುಭವಿಸುತ್ತಿದ್ದರು.  ಪ್ರಕೃತಿಯಲ್ಲಿಯೇ ಸಿಗುತ್ತಿದ್ದ ಸೊಪ್ಪು ಮೂಲಿಕೆಗಳನ್ನು ತಿಂದು ಬದುಕುತ್ತಿದ್ದರು  ಇಂದು ಅಂತಹ ಪರಿಸ್ಥಿತಿ ಇಲ್ಲದಿದ್ದರೂ ನಮ್ಮ ಹಿರಿಯರು ಬದುಕಿದ್ದ ಕಾಲಘಟ್ಟವನ್ನ ಮತ್ತೆ  ನೆನೆಪಿಸಿಕೊಳ್ಳುವುದರ ಜೊತೆಗೆ ಎಲ್ಲರೂ ತಮ್ಮ ಮನೆಗಳಲ್ಲಿ ತಯಾರಿಸಿ ತಂದಂತಹ ತಿಂಡಿಯನ್ನು ಜೊತೆಯಾಗಿ ಸವಿಯುವ ಅವಕಾಶವನ್ನು ಆಶೀರ್ವಾದ್ ಸೇವಾ ಸಂಘ ಮಾಡಿರುವುದು ಅಭಿನಂದನೀಯ ಎಂದರು. 

ಸಂಘದ ಗೌರವಾಧ್ಯಕ್ಷ ಗಣೇಶ್ ಸುವರ್ಣ ಮಾತನಾಡಿ ಆಶೀರ್ವಾದ್ ಸೇವಾ ಸಂಘ ಹಾಗೂ ಮಹಿಳಾ ಸಂಘದ ಆಶ್ರಯದಲ್ಲಿ ೯ನೇ ವರ್ಷದ ಆಟಿದ ಗಮ್ಮತ್ ಕಾರ್ಯಕ್ರಮವನ್ನು ನಾವು ಹಮ್ಮಿಕೊಂಡಿದ್ದೇವೆ. ಇತ್ತೀಚೆಗಷ್ಟೇ ಸಂಘದ ೩೫ನೇ ವಾರ್ಷಕೋತ್ಸವನ್ನು ಆಚರಿಸಿದ್ದು ಸಮಾಜಸೇವೆ ಆರೋಗ್ಯ,  ಮೊದಲಾದ ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿ ನಡೆಸಿಕೊಂಡು ಬರುತ್ತಿದೆ ಎಂದರು. 

ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ನಿವೃತ್ತ ಯೋಧ ವಿಜಯ್ ಕುಮಾರ್ ಎಂ.ಕೆ. ಹಾಗೂ ಉಪಾಧ್ಯಕ್ಷ ರಂಜಿತ್ ಬೊಳ್ಳಾರಿ ಅವರನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ನಗರ ಮತ್ತು ಗ್ರಾಮಂತರ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕ ಜಿತೇಶ್ ಉಡುಪಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಚಂದ್ರಾವತಿ ವಿಶ್ವನಾಥ,  ಪ್ರಮುಖರಾದ ಸತೀಶ್ ಕುಂಪಲ, ಪುದು ಗ್ರಾ.ಪಂ. ಸದಸ್ಯ ಪದ್ಮನಾಭ ಶೆಟ್ಟಿ ಪುಂಚಮೆ, ಹಿರಿಯರಾದ  ವೇಣುಗೋಪಾಲ ಕೊಟ್ಟಾರಿ, ಅರುಣ್ ಕುಮಾರ್ ಗಾಣದ ಲಚ್ಚಿಲ್, ತುಂಬೆ ಗ್ರಾ.ಪಂ. ಸದಸ್ಯೆ ಹೇಮಲತಾ ಪೂಜಾರಿ, ಅರ್ಚಕ ಸುಧಾಕರ ಕೊಟ್ಟಿಂಜ ಭಾಗವಹಿಸಿದ್ದರು.

ಸಂಘದ ಅಧ್ಯಕ್ಷ ಚೆನ್ನಕೇಶವ ಬೊಳ್ಳಾರಿ, ಕಾರ್ಯದರ್ಶಿ ಪ್ರವೇಶ್ ಕೋಟ್ಯಾನ್, ಉಪಾಧ್ಯಕ್ಷ ಪುನೀತ್ ಮುದಲ್ಮೆ, ಆಶೀರ್ವಾದ್ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಜಲಜಾಕ್ಷಿ ವಿಜಯ್ ಕೋಟ್ಯಾನ್, ಗೌರವಾಧ್ಯಕ್ಷೆ  ಪಾರ್ವತಿ ಐತಪ್ಪ ಕುಲಾಲ್, ಕಾರ್ಯದರ್ಶಿ ಶೃತಿ  ರಾಕೇಶ್ ಕೋಟ್ಯಾನ್, ಉಪಾಧ್ಯಕ್ಷೆ ಶ್ವೇತಾ ವಿಜಯ್ ಕುಮಾರ್ ಹಾಗೂ ಯಶೋಧಾ ಜಯಕರ್ ಕುಚ್ಚಿಗುಡ್ಡೆ ಉಪಸ್ಥಿತರಿದ್ದರು. 

ಸಂಚಾಲಕ ಸುಶಾನ್ ಆಚಾರ್ಯ ಪ್ರಾಸ್ತಾವಿಕ ಮಾತುಗಳೊಂದಿಗೆ  ಸ್ವಾಗತಿಸಿದರು, ಲಿಖಿತ ಬೊಳ್ಳಾರಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಮನೋರಂಜನಾ ಆಟೋಗಳು ಹಾಗೂ ಕೆಸರುಗದ್ದೆಯ ಆಟೋಟಗಳು ನಡೆಯಿತು. ಮಧ್ಯಾಹ್ನ ಸಂಘದ ಸದಸ್ಯರ ಮನೆಯಲ್ಲಿಯೇ ತಯಾರಿಸಿ ತಂದ ತುಳುನಾಡಿನ ಭಕ್ಷö್ಯಭೋಜ್ಯಗಳ ಸಹಭೋಜನ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter