ಉಚಿತ ಕಣ್ಣು ತಪಾಸಣಾ ಶಿಬಿರ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಬಂಟ್ವಾಳ ಹಾಗೂ ಜೆ.ಎಸ್. ಚಾರಿಟೇಬಲ್ ಆಸ್ಪತ್ರೆ ಇವರ ಸಹಭಾಗಿತ್ವದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರವು ಭಾನುವಾರ ಬಂಟ್ವಾಳ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನಾ ಕಚೇರಿ ಉನ್ನತಿ ಸೌಧದಲ್ಲಿ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಕೆ.ಎಸ್.ಹೆಗ್ಗಡೆ ಆಸ್ಪತ್ರೆಯ ವೈದ್ಯಾಧಿಕಾರಿ ಹೃರ್ಷಿಕೇಶ್ ಅಮೀನ್ ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾ. ಯೋ.ಬಿ.ಸಿ ಟ್ರಸ್ಟ್ ದ.ಕ.ಜಿಲ್ಲೆಯ ನಿರ್ದೇಶಕರಾದ ಮಹಾಬಲ ಕುಲಾಲ್ , ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡ, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ ,ಜ.ಜಾ.ಸದಸ್ಯರಾದ ಶೇಖರ್, ಸದಾನಂದ ಗೌಡ, ಒಕ್ಕೂಟದ ಅಧ್ಯಕ್ಷರಾದ ಪದ್ಮನಾಭ ಗೌಡ, ದಿನೇಶ್, ಕೃಷ್ಣಪ್ಪ ಪೂಜಾರಿ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮೇಲ್ವಿಚಾರಕರಾದ ರೂಪ.ಜೆ. ರೈ., ವೇದಾವತಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಚಂದ್ರಮೋಹಿನಿ ವಂದಿಸಿದರು. ಬಂಟ್ವಾಳ, ಬಿಸಿ ರೋಡು ವಲಯದ ಸೇವಾ ಪ್ರತಿನಿಧಿಗಳು ಇದ್ದರು