ಕೌಶಲಾಭಿವೃದ್ಧಿಯಲ್ಲಿ ತರಬೇತಿ ಪಡೆದ ಮಹಿಳೆಯರು ಕುಟುಂಬ ನಿರ್ವಹಿಸಲು ಯೋಗ್ಯರು: ಸ್ವಾಮಿ ವಿವೇಕಚೈತನ್ಯಾನಂದ
ಕೈಕಂಬ: ಕೌಶಲಾಭಿವೃದ್ಧಿಯಲ್ಲಿ ತರಬೇತಿ ಪಡೆದ ಮಹಿಳೆಯರು ಕುಟುಂಬ ನಿರ್ವಹಿಸಲು ಯೋಗ್ಯರು ಎಂದು ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು. ಅವರು ಆ.2ರಂದು ಬುಧವಾರ ರಾಮಕೃಷ್ಣ ತಪೋವನದಲ್ಲಿ 7 ದಿನಗಳ ತೆಂಗಿನ ಗೆರಟೆಯಲ್ಲಿ ಕರಕುಶಲ ವಸ್ತು ತಯಾರಿಕೆಯ ಉಚಿತ ತರಬೇತಿಯ ಸಮಾರೋಪ ಸಂಮಾರಂಭದಲ್ಲಿ ಮಾತನಾಡಿ ತರಬೇತಿ ಪಡೆದ ಮಹಿಳೆಯರು ಸ್ವ ಉದ್ಯೋಗ ಮಾಡಲು ಬೇಕಾದ ನೆರವು ನೀಡುವ ಭರವಸೆ ನೀಡಿದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ನೇತೃತ್ವದಲ್ಲಿ, ರಾಮಕೃಷ್ಣ ತಪೋವನ ಪೊಳಲಿ ಇವರ ಸಹಕಾರದಲ್ಲಿ ನಡೆದ ತರಬೇತಿಯ ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು .ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ವಹಿಸಿ ಮಾತನಾಡಿದರು.
” ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಟನಾ, ಇದರ ಮುಖ್ಯ ಕಾರ್ಯ ನಿರ್ವಾನಿಧಿಕಾರಿ ಸಚಿನ್ ಹೆಗ್ಡೆ ತರಬೇತಿ ಪಡೆದು ಮಹಿಳೆಯರು ತಯಾರಿಸಿದ ತೆಂಗಿನ ಗೆರಟೆ ಕರಕುಶಲ ವಸ್ತುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಆಡಳಿತಧಿಕಾರಿ ಮಹೇಶ್ ಭಟ್, ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕಾರದ ಮನೋಹರ್ ಕಟಗೇರಿ, ಶ್ರೀ ಜೀವನ್ ಕೊಲ್ಯ, ಪೊಳಲಿ ಬ್ಯಾಂಕ್ ಆಫ್ ಬರೋಡ ಶಾಖಾ ಪ್ರಬಂಧಕ ನಿತಿನ್ ರಾವ್, ತರಬೇತುದಾರದಾರ ದಿನೇಶ್ ಉಪಸ್ಥಿತರಿದ್ದರು.
ಮಂಜುಳ ಶೆಟ್ಟಿ ಸ್ವಾಗತಿಸಿ ವನಿತಾ ವಂದಿಸಿದರು. ಗುಣವತಿ ಕಾರ್ಯಕ್ರಮ ನಿರೂಪಿಸಿದರು. 7 ದಿನಗಳ ತೆಂಗಿನ ಗೆರಟೆಯಲ್ಲಿ ಕರಕುಶಲ ವಸ್ತು ತಯಾರಿಕೆಯ ಸುಮಾರು 25 ಮಹಿಳೆಯರು ಪ್ರಮಾಣ ಪತ್ರ ಪಡೆದರು.