ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭ ಬಲಿ ಉತ್ಸವ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಮಯ್ಯರ ಬೀಡು ಮಾಧವ ಮಯ್ಯ (೬೩) ಅವರು ಆ. ೨ ರಂದು ಬುಧವಾರ ಹೃದಯಘಾತದಿಂದ ನಿಧನಹೊಂದಿದರು.

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಬ್ರಹ್ಮ ವಾಹಕರಾಗಿ ಸೇವೆ

ಶ್ರೀ ಕ್ಷೇತ್ರ ಪೊಳಲಿಯ ಉತ್ಸವದಲ್ಲಿ ಸುಮಾರು ೩೩ ವರ್ಷಗಳಿಂದ ಬ್ರಹ್ಮ ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಕೃಷಿ ಚಟುವಟಿಕೆಯಲ್ಲಿಯು ಉತ್ಸುಕರಾಗಿದ್ದರು. ಅಲ್ಲದೇ ಸಾವಿರಸೀಮೆಯಲ್ಲಿ ನಡೆಯುವಂತಹ ಪೂಜಾಕೈಂಕರ್ಯದಲ್ಲಿ ಭಾಗವಹಿಸುತ್ತಿದ್ದರು.

ಮೃತರು ಪತ್ನಿ ಇಬ್ಬರು ಪುತ್ರರು , ಒರ್ವ ಪತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಮಯ್ಯರ ಬೀಡಿನ ಗದ್ದೆಯಲ್ಲಿ ಅಂತ್ಯ ಸಂಸ್ಕಾರ ನೆರವೇಸರಿಸಲಾಯಿತು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ. ಮಂಜಯ್ಯ ಶೆಟ್ಟಿ, ಆಡಳಿತ ಮಂಡಳಿ, ಅಮ್ಮುಂಜೆಗುತ್ತು ಜೀವರಾಜ್ ಶೆಟ್ಟಿ, ದೇವಳದ ಅರ್ಚಕರು , ಸಿಬ್ಬಂದಿವರ್ಗ ಹಾಗೂ ಅಪಾರ ಸಂಖೈಯಲ್ಲಿ ಅವರ ಹಿತೈಷಿಗಳು, ಕುಟುಂಬಸ್ತರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.

By Suddi9

Leave a Reply

Your email address will not be published. Required fields are marked *