ಬಡವರ ಬದುಕಿಗೆ ಸೂರನ್ನು ಒದಗಿಸಿಕೊಟ್ಟ ನೆತ್ತರಕೆರೆಯ ಸಂಘಟನೆಗಳು
ಬಂಟ್ವಾಳ: ಪೊಳಲಿ ಶ್ರೀರಾಮಕೃಷ್ಣ ತಪೋವನದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ,ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ, ನವೋದಯ ಮಿತ್ರಕಲಾ ವೃಂದ ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಪೂರ್ಣಗೊಂಡಿದ್ದ ಮನೆಯನ್ನು ದಾನಿಗಳ ನೆರವಿನಲ್ಲಿ ಪೂರ್ಣಗೊಳಿಸಿ ಫಲಾನುಭವಿಗೆ ಹಸ್ತಾಂತರಿಸಲಾಯಿತು.
ಆಪೂರ್ಣಗೊಂಡಿದ್ದ ಮನೆಯನ್ನು ಸುಮಾರು 2.50 ಲಕ್ಷ ಖರ್ಚಿನೊಂದಿಗೆ ಪೂರ್ಣಗೊಳಿಸಿ ಫಲಾನುಭವಿಗಳಾದ ಮೋಹಿನಿ ಲಿಂಗಪ್ಪ ಜಿ.ಎಸ್. ದಂಪತಿಗಳಿಗೆ ಪೊಳಲಿಯ ಪೂಜ್ಯ ಸ್ವಾಮೀಜಿ, ಶ್ರೀ ವಿವೇಕ ಚೈತನನ್ಯಾನಂದರು ಹಾಗೂ ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ ಪ್ರಭೂಜಿಯವರು ದೀಪವನ್ನು ಬೆಳಗಿ,ಭಾರತ ಮಾತೆಯ ಭಾವಚಿತ್ರವನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
ಈ ಸಂದರ್ಭ ಮನೆ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ದಾನಿಗಳನ್ನು ಸ್ವಾಮೀಜಿಯವರು ಗೌರವಿಸಿದರು.
ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಇದರ ಸಂಯೋಜಕರು, ನವೋದಯ ಮಿತ್ರಕಲಾವೃಂದದ ಅಧ್ಯಕ್ಷರಾದ ಸಂತೋಷ್ ಕುಮಾರ್ ನೆತ್ತರಕೆರೆ ಉಪಸ್ಥತರಿದ್ದರು.
ಸದಸ್ಯರಾದ ದಾಮೋದರ್ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.