ಬಂಟ್ವಾಳ: ದೇಶದೆಲ್ಲೆಡೆ ಗುರುವಾರ ಸಂಭ್ರಮ ಸಡಗರದ ಬಕ್ರೀದ್ ಹಬ್ಬ ಆಚರಿಸುತ್ತಿದ್ದು ಸರ್ವ ಮುಸ್ಲಿಂ ಬಾಂಧವರು ಮಸೀದಿಗಳಿಗಳಿಗೆ ತೆರಳಿ ಪ್ರಾರ್ಥನೆ ಮತ್ತು ಪರಸ್ಪರ ಶುಭಾಶಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬದ್ರಿಯಾ ಜುಮಾ ಮಸೀದಿ ಪುಂಜಾಲಕಟ್ಟೆಯಲ್ಲಿ ಬೆಳಿಗ್ಗೆ  ಈದ್ ನಮಾಝ್ ನೆರವೇರಿಸಲಾಯಿತು. ಸಹಾಯಕ ಖತೀಬರಾದ ಮಜೀದ್ ದಾರಿಮಿ ಬಕ್ರೀದ್ ಹಬ್ಬದ ತ್ಯಾಗ ಬಲಿದಾನದ ಮಹತ್ವದ ಬಗ್ಗೆ ಸಂದೇಶ ನೀಡಿ ಖುತುಬಾ ನೆರವೇರಿಸಿದರು ಮತ್ತು ಬಹು ಇಕ್ಬಾಲ್ ಅಝ್ಹರಿ ನಮಾಝ್ ನೇತೃತ್ವ ನೀಡಿದರು.


ಆಲಡ್ಕ ಮಸೀದಿಯಲ್ಲು ಆಚರಣೆ:
ಪಾಣೆಮಂಗಳೂರು-ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ,ಬಂಟ್ವಾಳ ಸಹಿತ ವಿವಿಧ ಮಸೀದಿಗಳಲ್ಲಿ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಪವಿತ್ರ ಇಸ್ಲಾಂ ಧರ್ಮ ಹಬ್ಬಾಚರಣೆಗೆ ಅದರದ್ದೇ ಆದ ಮಹತ್ವವನ್ನು ಕಲ್ಪಿಸಿದ್ದು, ಧಾರ್ಮಿಕ ಇತಿ-ಮಿತಿಯೊಳಗೆ ಸಂತೋಷಾಚರಣೆಗೆ ಅನುವು ಮಾಡಿಕೊಟ್ಟಿದೆ. ಹಬ್ಬದ ಸಂತೋಷಾಚರಣೆ ಸಂದರ್ಭದಲ್ಲೂ ಸಮಾಜದಲ್ಲಿರುವ ಬಡವರನ್ನು, ನಿರ್ಗತಿಕರು , ಅಶಕ್ತರು  ಹಾಗೂ ಅನಾಥರಿಗೆ  ಸಹಾಯ-ಸಹಕಾರಗಳನ್ನು ಒದಗಿಸಿಕೊಡುವ ಮೂಲಕ ನಾವು ಕಾರುಣ್ಯ ತೋರುವವರಾಗಬೇಕು. ಹೀಗಾದಾಗ ಈದ್ ಹಬ್ಬಕ್ಕೆ ವಿಶೇಷ ಅರ್ಥ ಬರುತ್ತದೆ  ಎಂದು ಪಾಣೆಮಂಗಳೂರು-ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಹೇಳಿದರು.


ತಾಲೂಕಿನ ಪಾಣೆಮಂಗಳೂರಿನಲ್ಲಿ  ಮಸೀದಿಯಲ್ಲಿ ನಡೆದ ಈದ್ ಪ್ರಾರ್ಥನೆ ಹಾಗೂ ಖುತುಬಾಗೆ ನೇತೃತ್ವ ನೀಡಿದ ಬಳಿಕ ಅವರು ಈದ್ ಸಂದೇಶ ನೀಡಿದರು.ಆಲಡ್ಕ ಬದ್ರಿಯಾ ಜುಮಾ ಮಸೀದಿ ಹಾಗೂ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಗಳಲ್ಲಿ ಅಶ್ರಫ್ ಸಖಾಫಿ ಸವಣೂರು ಹಾಗೂ ಅಸ್ವೀಫ್ ದಾರಿಮಿ ಈದ್ ಪ್ರಾರ್ಥನೆ ಹಾಗೂ ಖುತುಬಾ ನೇತೃತ್ವ ವಹಿಸಿದರು.


ಈದ್ ವಿಶೇಷ ಪ್ರಾರ್ಥನೆ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಈದ್ ಶುಭಾಶಯ ವಿನಿಮಯ ಮಾಡಿಕೊಂಡರು. 

By Suddi9

Leave a Reply

Your email address will not be published. Required fields are marked *