ಬಂಟ್ವಾಳ: ತಾಲೂಕಿನ ಬೆಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ )ದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಗುರುವಾರ ಶ್ರೀ ಆದಿಶಕ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು

ಸಂಘದ ಅಧ್ಯಕ್ಷ  ನಂದರಾಮ ರೈ ವಹಿಸಿ ಮಾತನಾಡಿ,ಸಂಘವು ಪ್ರಸಕ್ತ ಸಾಲಿನಲ್ಲಿ1655273.00 ರೂ.ಲಾಭಗಳಿಸಿದ್ದು,ಸದಸ್ಯರಿಗೆ ಶೇ.3 ಡಿವಿಡೆಂಟ್ ಘೋಷಿಸಿದರಲ್ಲದೆ ಸಂಘವು.1,23,69,866.00 ರೂ.ಷೇರು ಬಂಡವಾಳ, 10, 03,00,953.00 ರೂ.ಠೇವಣಿಯನ್ನು ಹೊಂದಿದ್ದು,, 3,89,18,729.00 ರೂ.ಹೂಡಿಕೆ ಮಾಡಲಾಗಿದ್ದು,
11,78,20,045.00 ರೂ.ಸದಸ್ಯರಿಗೆ ಸಾಲವನ್ನು ವಿತರಿಸಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷರಾದ ಅನಂತ್ ರಾಮ್ ಹೇರಳ ಮಾತನಾಡಿ,  ಸಂಘದಲ್ಲಿ  ಪಾಲು ಬಂಡವಾಳ  ಹೆಚ್ಚಿಸುವುದು ಹಾಗೂ  ಅಭಿವೃದ್ಧಿಯ ನಿಟ್ಟಿನಲ್ಲಿ ಸಹಕರಿಸುವಂತೆ  ಸದಸ್ಯರಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ನಿರ್ದೇಶಕರುಗಳಾದ ನಿರಂಜನ ಸೇಮಿತ, ರವೀಂದ್ರ ಮೇಲಾಂಟ, ಗುಣಪಾಲ ಶೆಟ್ಟಿ, ಚಿದಾನಂದ, ನವೀನ್ ಫೆರ್ನಾಂಡಿಸ್, ಕ್ರಷ್ಣ ನಾಯ್ಕ್, ಸುನೀತಾ, ಕುಮಾರಿ ಯಮುನಾ  ಉಪಸ್ಥಿತರಿದ್ದರು.
ಕಾವ್ಯಶ್ರೀ  ಸ್ವಾಗತಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ಅವರು ಪ್ರಸಕ್ತ ಸಾಲಿನ ವರದಿ,ಲೆಕ್ಕಪತ್ರ ವಾಚಿಸಿದರು. ನವೀನ್  ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *