ವಾಮಂಜೂರು ವಿದ್ಯಾಜ್ಯೋತಿ ಶಾಲೆಯಲ್ಲಿ ಆರಂಭೋತ್ಸವ
ಶಾಲಾ ಮಕ್ಕಳಿಂದ ಭವ್ಯ ಮೆರವಣಿಗೆ
ಕೈಕಂಬ: ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಅತಿ ವಿಜೃಂಭಣೆಯಿಂದ ಶಾಲಾ ಆರಂಭೋತ್ಸವ ಜರುಗಿತು.

ಶಾಲಾ ಬ್ಯಾಂಡ್, ವಾದ್ಯ ಹಾಗೂ ಯಕ್ಷಗಾನದ ವೇಷ, ಗಿಡಮರಗಳ ರಕ್ಷಣೆಯ ಪ್ರತಿಕೃತಿದೊಂದಿಗೆ ಶಾಲೆಯಿಂದ ಹೊರಟ ಸಮವಸ್ತçಧಾರಿ ವಿದ್ಯಾರ್ಥಿಗಳ ಭವ್ಯ ಮೆರವಣಿಗೆ ವಾಮಂಜೂರು ಚರ್ಚ್, ಅಲ್ಲಿಂದ ವಾಮಂಜೂರು ಜಂಕ್ಷನ್‌ವರೆಗೆ ಮುಂದುವರಿದು ಬಳಿಕ ಶಾಲೆಯೊಳಗೆ ಪ್ರವೇಶಿಸಿತು. ಎಲ್‌ಕೆ, ಯುಕೆಜಿ ಮಕ್ಕಳಿಂದ ಸ್ವಾಗತ ನೃತ್ಯ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಕೂಲ್ ಕರೆಸ್ಪಾಂಡೆನ್ಸ್ ಸಿಸ್ಟರ್ ಜೋಯೆಲ್ ಲಾಸ್ರದೊ ಮಾತನಾಡಿ, ನಿಮ್ಮ ಕಲಿಕೆ ಇಂದಿನಿAದಲೇ ಆರಂಭವಾಗಬೇಕು. ಕಲಿಕೆಯಲ್ಲಿ ಶ್ರಮವಿರಲಿ, ಆಲಸ್ಯ ಬೇಡ. ಎಲ್ಲರೂ ಡಿಸ್ಟಿಂಕ್ಶನ್‌ನಲ್ಲಿ ತೇರ್ಗಡೆ ಹೊಂದುವAತೆ ಪಾಠ ಪ್ರವಚನದ ಮೇಲೆ ಗಮನ ಕೇಂದ್ರೀಕರಿಸಿ ಎಂದು ಹಾರೈಸಿದರು.

ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ವಿರೋನಿಕಾ ಲೋಪೀಸ್, ಎಸ್‌ಆರ್‌ಎ ಸುಪೀರಿಯರ್ ಸಿಸ್ಟರ್ ಮಾರ್ಲೆಟ್, ಪಿಟಿಎ ಅಧ್ಯಕ್ಷ ಅಬ್ದುಲ್ ರಜಾಕ್ ಹಾಗೂ ಪುಟಾಣಿಗಳಿಬ್ಬರು ವೇದಿಕೆಯಲ್ಲಿದ್ದರೆ, ಸಭೆಯಲ್ಲಿ ಶಾಲಾ ಶಿಕ್ಷಕಿಯರು, ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಸರಿತಾ ನಿರೂಪಿಸಿದರು. ಶಿಕ್ಷಕಿ ದೀಪಿಕಾ ಸ್ವಾಗತಿಸಿದರೆ, ಶಿಕ್ಷಕಿ ಸವಿತಾ ವಂದಿಸಿದರು.