ಗಂಜಿಮಠದಲ್ಲಿ ಒಟ್ಟು ೬೨೭೭.೫೫೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಬಹು ನಿರೀಕ್ಷಿತ ಪ್ಲಾಸ್ಟಿಕ್ ಪಾರ್ಕ್
ಕೈಕಂಬ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲುಗಾರಿಕೆಯಲ್ಲಿ ಗಂಜಿಮಠದಲ್ಲಿ ಒಟ್ಟು ೬೨೭೭.೫೫೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಬಹು ನಿರೀಕ್ಷಿತ ಪ್ಲಾಸ್ಟಿಕ್ ಪಾರ್ಕ್ ಮುಂದಿನ ವರ್ಷ ಕಾರ್ಯಗತಗೊಳ್ಳಲಿದೆ. ಎಲ್ಲವೂ ಸರಿ ಹೊಂದಿದಲ್ಲಿ ಮುಂದಿನ ತಿಂಗಳು ಈ ಕೈಗಾರಿಕೋದ್ಯಮ ಸ್ಥಾಪನಗೆ ಶಿಲಾನ್ಯಾಸ ನೆರವೇರಲಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಶನಿವಾರ ಗಂಜಿಮಠ ಪಂಚಾಯತ್ ವ್ಯಾಪ್ತಿಯ ನಾರಳಪದವಿನಲ್ಲಿ ಒಟ್ಟು ೧೦೪.೨೮ ಎಕ್ರೆ ಸರ್ಕಾರಿ ಜಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ಲಾಸ್ಟಿಕ್ ಪಾರ್ಕ್ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ, ಕಾಮಗಾರಿ ಪ್ರಗತಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ಲಾಸ್ಟಿಕ್ ಪಾರ್ಕ್ಗೆ ದೊಡ್ಡ ಮತ್ತು ಸಣ್ಣ ಉದ್ದಿ ಮೆಗಳು ಬರಲಿರುವುದರಿಂದ ಸಾವಿರದಷ್ಟು ಸ್ಥಳೀಯರ ಸಹಿತ ಅಂದಾಜು ೧೦,೦೦೦ ಮಂದಿಗೆ ಉದ್ಯೋಗಾವಕಾಶ ನಿರೀಕ್ಷಿಸಲಾಗಿದೆ ಎಂದರು.

ಕೇAದ್ರ ಸರ್ಕಾರ ರಾಜ್ಯದಲ್ಲಿ ನಾಲ್ಕು ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಪ್ರಸ್ತಾವಿಸಿದ್ದರೂ ದಕ್ಷಿಣಕನ್ನಡದ ಗಂಜಿಮಠದಲ್ಲಿ ಮಾತ್ರ ಅದು ಅನುಷ್ಠಾನಗೊಳ್ಳುತ್ತಿದೆ. ಉಳಿದ ಮೂರು ಪ್ರಸ್ತಾವಗಳು ರದ್ದಾಗಿವೆ. ಇದು ಎಂಆರ್‌ಪಿಎಲ್‌ನAತಹ ಕೈಗಾರಿಕೋದ್ಯಮಕ್ಕಿಂತ ಭಿನ್ನವಾಗಿದೆ. ಇಲ್ಲಿ ಸಣ್ಣ ಉದ್ದಿಮೆದಾರರಿಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕಲಿದೆ. ಇಲ್ಲಿ ಉದ್ದಿಮೆ ಹೂಡಿಕೆಗೆ ಮುಂಬೈ, ಮಂಗಳೂರಿನAತಹ ಮಹಾನಗರಗಳ ಉದ್ದಿಮೆದಾರರು ಆಸಕ್ತಿ ತೋರಿಸಿದ್ದಾರೆ ಎಂದರು.

ಕೆಐಎಡಿಬಿನ ಇಂಜಿನಿಯರ್ ಗಣಪತಿ ಅವರು ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣದ ನೀಲಿ ನಕ್ಷೆ ಸಹಿತ ಸಮಗ್ರ ಮಾಹಿತಿ ನೀಡಿದರು. ಕೈಗಾರಿಕೋದ್ಯಮಗಳ ಜಂಟಿ ನಿರ್ದೇಶಕ ಗೋಕುಲದಾಸ್ ಸ್ವಾಗತಿಸಿದರು. ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಗಂಜಿಮಠ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಪಂಚಾಯತ್ ಸದಸ್ಯರು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ,ವಿವಿಧ ಇಲಾಖಾ ಅಧಿಕಾರಿಗಳು, ಕೈಗಾರಿಕೋದ್ಯಮ ಸಂಘಟನೆಯ ಪ್ರತಿನಿಧಿ ನಝೀರ್, ಉದ್ಯಮಿಗಳು, ಸ್ಥಳೀಯ ಮುಖಂಡರು, ಗುತ್ತಿಗೆದಾರ ಯಾದವ ಕೋಟ್ಯಾನ್ ಪೆರ್ಮುದೆ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು. ಸ್ಥಳೀಯರು ಲಿಖಿತ ಹಾಗೂ ಮೌಖಿಕವಾಗಿ ಕೆಲವು ಬೇಡಿಕೆಯನ್ನು ಮುಂದಿಟ್ಟರು.
ಹೀಗಿದೆ ಪ್ಲಾಸ್ಟಿಕ್ ಪಾರ್ಕ್ :

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಗಂಜಿಮಠದ ನಾರಳಪದವಿನಲ್ಲಿ ಪ್ಲಾಸ್ಟಿಕ್ ಪಾರ್ಕ್(ಇಪಿಐಪಿ ೨ನೇ ಹಂತ) ಹೆಸರಲ್ಲಿ ಈ ಕೈಗಾರಿಕೋದ್ಯಮ ತಲೆ ಎತ್ತಲಿದೆ. ಇದರಲ್ಲಿ ರಸ್ತೆ, ಆರ್‌ಸಿಸಿ ಚರಂಡಿ, ಸಿಐಪಿಇಟಿ ಕಟ್ಟಡ, ಪುರುಷರು ಮತ್ತು ಮಹಿಳೆಯರಿಗೆ ವಸತಿಗೃಹ, ಅತಿಥಿಗೃಹ, ಕೆಫೆಟೇರಿಯ, ವೇರ್‌ಹೌಸ್, ಸಿಇಪಿಟಿ, ನೀರು ಪೂರೈಕೆ ಮತ್ತು ಒಳಚರಂಡಿ ನಿರ್ಮಾಣಗೊಳ್ಳಲಿದೆ.

ಕೇಂದ್ರ ಸರ್ಕಾರದ ೩೧೩೮.೭೭೫ ಲಕ್ಷ ರೂ. ಹಾಗೂ ಕೆಐಎಡಿಬಿಯಿಂದ ೩೧೩೮.೭೭೫ ಲಕ್ಷ ರೂ. ಇಕ್ವಿಟಿ ಕೊಡುಗೆ ಸಹಿತ ಒಟ್ಟು ೬೨.೭೭.೫೫೦ ಲಕ್ಷ ರೂ ವೆಚ್ಚದಲ್ಲಿ, ಒಟ್ಟು ೧೦೪.೨೮ ಎಕ್ರೆ ಜಾಗದಲ್ಲಿ ಪ್ಲಾಸ್ಟಿಕ್ ಪಾರ್ಕ್(ಪಿಪಿ) ನಿರ್ಮಾಣಗೊಳ್ಳಲಿದೆ.

ಇದರಲ್ಲಿ ದೊಡ್ಡ ಉದ್ದಿಮೆಗಳು ಸುಮಾರು ೧೩ ಎಕ್ರೆ ಜಾಗದಲ್ಲಿ ಹಾಗೂ ೦.೨೧ ಎಕ್ರೆ ಜಾಗದಲ್ಲಿ ಸಣ್ಣ ಉದ್ದಿಮೆಗಳು ಕಾರ್ಯ ನಿರ್ವಹಿಸಲಿವೆ. ಸಿಐಪಿಇಟಿ ಮತ್ತು ಆಡಳಿತ ಕಚೇರಿ ೩೫೬೧ ಚ.ಮೀ, ಪುರುಷರ ವಸತಿಗೃಹ ೮೧೨.೭೨ ಚ.ಮೀ, ಮಹಿಳೆಯರ ವಸತಿಗೃಹ ೬೮೮.೭೫ ಚ.ಮೀ, ವೇರ್‌ಹೌಸ್ ೨೨೫೦ ಚ.ಮೀ, ಅತಿಥಿಗೃಹ ೩೮೫.೦೦ ಚ.ಮೀ ಮತ್ತು ಕೆಫೆಟೇರಿಯ ೪೮೯.೨೦ ಚ.ಮೀ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿದೆ.