ಕುಪ್ಪೆಪದವು: ಅರೋಗ್ಯ ಸಹಾಯಕ ಚಂದ್ರಶೇಖರ ಪೂಜಾರಿ ನಿವೃತ್ತಿ
ಕೈಕಂಬ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 26 ವರ್ಷಗಳಿಂದ ಎರಡನೇ ದರ್ಜೆ ಆರೋಗ್ಯ ಸಹಾಯಕರಾಗಿ ಸೇವೆ ಸಲ್ಲಿಸಿದ ಬಡಗ ಬೆಳ್ಳೂರು ಗ್ರಾಮದ ಸೂರ್ಲ ಚಂದ್ರಶೇಖರ ಪೂಜಾರಿ ಯವರು ಮೇ 31 ರ ಬುಧವಾರ ಸೇವೆಯಿಂದ ನಿವೃತ್ತರಾದರು.

ಅವರು ರಾಯಚೂರಿನಲ್ಲಿ 1989ರಲ್ಲಿ ಸೇವೆಯನ್ನು ಪ್ರಾರಂಭಿಸಿದ್ದ ಚಂದ್ರಶೇಖರ ಪೂಜಾರಿಯವರು ಕಳೆದ 26 ವರ್ಷಗಳಿಂದ ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮ ಆರೋಗ್ಯ ಸಹಾಯಕ ಎಂದು ಗುರುತಿಸಿಕೊಂಡಿದ್ದರು. ಇವರನ್ನು ಕುಪ್ಪೆಪದವು ಗ್ರಾಮದ ನಾಗರಿಕರು ಅಭಿನಂದಿಸಿ ಬೀಳ್ಕೊಟ್ಟರು.