ಮಿಜಾರುಗುತ್ತು ಶ್ರೀಮತಿ ಲೀಲಾ ವಿ ನಾಯ್ಕ್ ನಿಧನ
ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಅಮ್ಮುಂಜೆ ಗುತ್ತು ವಿನೋದ್ ನಾಯ್ಕ್ ಅವರ ಧರ್ಮಪತ್ನಿ ಮಿಜಾರುಗುತ್ತು ಶ್ರೀಮತಿ ಲೀಲಾ ವಿ ನಾಯ್ಕ್(೮೪) ಅವರು ಸೆ.೦೬ರಂದು ಮಂಗಳವಾರ ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ಅಮ್ಮುಂಜೆ ಕಣಿಯೂರಿನ ಅವರ ಸ್ವಗೃಹದಲ್ಲಿ ನಿಧನರಾದರು. ಅವರು ಪತಿ, ಮೂವರು ಪುತ್ರಿಯರು, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.