ಗುರುಪುರ ಕೈಕಂಬದ ರಮೇಶ್ ರಾವ್ ನಿಧನ
ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಕೈಕಂಬದ ಶ್ರೀನಿವಾಸ್ ಎಂಟರ್ ಪ್ರೈಸಸ್ ಇದರ ಮಾಲಕರಾದ ರಮೇಶ್ ರಾವ್ (೬೩) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದರು.

ಇವರು ಗುರುಪುರ ಕೈಕಂಬದಲ್ಲಿ ಹಲಾವಾರು ವರ್ಷಗಳಿಂದ ಶ್ರೀನಿವಾಸ್ ಎಂಟರ್ ಪ್ರೈಸಸ್ ಎಂಬ ಸಂಸ್ಥೆ ನಡೆಸುತ್ತಿದ್ದ ರಮೇಶ್ ರಾವ್ ಅವರು ಕೈಕಂಬದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಹಿರಿಯ ಸದಸ್ಯರಾಗಿ ಹಾಗೂ ಹಲವಾರು ಸಂಘ-ಸoಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರಲ್ಲದೇ, ಮಂಗಳೂರು ಆಕಾಶವಾಣಿಯ ಖಾಯಂ ಕೇಳುಗರಾಗಿ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ, ಒರ್ವ ಪುತ್ರಿ ಮತ್ತು ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.