ಬಂಟ್ವಾಳ: ಇಲ್ಲಿನ ಬೈಪಾಸ್ ತುಂಬೆ ಜಂಕ್ಷನ್ ನಲ್ಲಿ ಕಾರ್ಯಾಚರಿಸುವ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಭೆಯು ಸಮಾಜ ಸೇವಾ ಬ್ಯಾಂಕ್ ನ ಸಭಾಭವನದಲ್ಲಿ ನಡೆಯಿತು.ಬಂಟ್ವಾಳ ತಾಲೂಕು ರಿಕ್ಷಾ ಚಾಲಕ-ಮಾಲಕರ ಸಂಘದ ಬಿಎಂ ಎಸ್ ಘಟಕದ ಅಧ್ಯಕ್ಷ ಸತೀಶ್ ಭಂಡಾರಿಬೆಟ್ಟು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ್ ಕುಮಾರ್ ಮಣಿಹಳ್ಳ ಸಂಘದ ಕುರಿತು ಮಾಹಿತಿ ನೀಡಿದರು.

ಮೋಟರ್ ಅ್ಯಂಡ್ ಜನರಲ್ ಮಜ್ದೂರು ಸಂಘದ ಉಪಾಧ್ಯಕ್ಷ ನಾರಾಯಣ ಪೂಜಾರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಪಾಣೆಮಂಗಳೂರು, ಉಪಾಧ್ಯಕ್ಷರಾದ ಅನಿಲ್ ಪೂಜಾರಿ ,ದಿನೇಶ್ ಎನ್.ಸಿ ರೋಡ್ , ಸಂಘಟನಾ ಕಾರ್ಯದರ್ಶಿ ಉಮಶಂಕರ್ ,ಸಹ ಸಂಘಟನಾ ಕಾರ್ಯದರ್ಶಿ ಸುರೇಶ್ ಕಾಡಬೆಟ್ಟು ,ಜೊತೆ ಕಾರ್ಯದರ್ಶಿ ಪರಮೇಶ್ವರ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು
ಗೌರವಾಧ್ಯಕ್ಷರಾಗಿ ದಾಮೋದರ, ಅಧ್ಯಕ್ಷರಾಗಿ ರಮೇಶ್ ಗೌಡ, ಉಪಾಧ್ಯಕ್ಷರಾಗಿ ಜಯ ಕೋಟ್ಯಾನ್ ,ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ,ಜೊತೆ ಕಾರ್ಯದರ್ಶಿಯಾಗಿ ಸತೀಶ್ ಸಪಲ್ಯ ,ಸಂಘಟನಾ ಕಾರ್ಯದರ್ಶಿಯಾಗಿ ಜಯ ಪೂಜಾರಿ
ಕೋಶಾಧಿಕಾರಿಯಾಗಿ ಶಿವಾನಂದ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ವೇಳೆ ರಿಕ್ಷಾ ಪಾರ್ಕಿಗೆ ಸಂಬಂಧ ಪಟ್ಟಂತೆ ಎಲ್ಲಾ ಚಾಲಕರ ಒಪ್ಪಿಗೆಯನ್ವಯ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು
ರಾಜೇಶ್ ಕುಮಾರ್ ಸ್ವಾಗತಿಸಿದರು. ರಮೇಶ್ ಗೌಡ ವಂದಿಸಿದರು.ಉಮಾಶಂಕರ್ ಕಾರ್ಯಕ್ರಮ ನಿರೂಪಿಸಿದರು.
