ಬಂಟ್ವಾಳ : ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ 2026 ನೇ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಮಾಜಿ ಅದ್ಯಕ್ಷ ರಹೀಂ ಬಿ.ಸಿ.ರೋಡ್ ಅವರನ್ನು ಮೆಲ್ಕಾರ್ ನ ಸಂಸ್ಥೆಯ ಕಛೇರಿಯಲ್ಲಿ  ಸನ್ಮಾನಿಸಲಾಯಿತು.

ಘಟಕಾದ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅಭಿನಂದನಾ ಭಾಷಣಗೈದರು.

ಜಮೀಯ್ಯತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಹಾಜಿ ಮಹಮ್ಮದ್ ಹನೀಫ್ ಗೋಳ್ತಮಜಲು, ಕೆ.ಕೆ.ಸಾಹುಲ್ ಹಮೀದ್, ಬಂಟ್ವಾಳ ಘಟಕದ ಪೂರ್ವಾದ್ಯಕ್ಷರುಗಳಾದ ಎಂ.ಎಚ್.ಇಕ್ಬಾಲ್, ಎಫ್.ಎಂ.ಬಶೀರ್, ಮುಹಮ್ಮದ್ ರಫೀಕ್ ಹಾಜಿ ಆಲಡ್ಕ, ಆಸಿಫ್ ಇಕ್ಬಾಲ್ ಕುಂಪನಮಜಲು, ನೋಟರಿ ಅಬೂಬಕ್ಕರ್ ವಿಟ್ಲ, ಪಿ.ಮಹಮ್ಮದ್ ಪಾಣೆಮಂಗಳೂರು ಅಜೀವ ಸದಸ್ಯರುಗಳಾದ ಕೆ.ಎಸ್. ಮಹಮ್ಮದ್ ಕಡೇಶ್ವಾಲ್ಯ, ಮಹಮ್ಮದ್ ನಾರಂಕೋಡಿ, ಮುಹಮ್ಮದ್ ಸಾಗರ್, ಆನಿಯಾ ದರ್ಬಾರ್ ಹಂಝ ಬಸ್ತಿಕೋಡಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಅಬ್ದುಲ್ ಹಕೀಂ ಕಲಾಯಿ ಸ್ವಾಗತಿಸಿ ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. 

By Suddi9