ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಜು.13ರಂದು ಬುಧವಾರ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಭಟ್ ಬಡಕ್ಕಿಲ ಸಹಿತ ನಿವೃತ್ತ ಮುಖ್ಯಶಿಕ್ಷಕ ಕಾಂಚನ ವೆಂಕಟ ಸುಬ್ರಹ್ಮಣ್ಯ ಅಯ್ಯರ್ ಮತ್ತು ನಿವೃತ್ತ ಮುಖ್ಯಶಿಕ್ಷಕಿ ವಸಂತಿ ಕುಮಾರಿ ಹಾಗೂ ನಿವೃತ್ತ ಶಿಕ್ಷಕಿ ಕೇಶವ್ ಆಚಾರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆ ಸಹ ಸಂಚಾಲಕ ರಮೇಶ್ ಶ್ರೀಮಾನ್, ಮುಖ್ಯಶಿಕ್ಷಕಿ ಶಾಂಭವಿ ಮಾತಾಜಿ, ಮನಸ್ವಿ, ಅನುಷಾ ಆಳ್ವ, ಉಮಾ ಭಾರತಿ ಇದ್ದರು.

