ಜು.26ರಂದು ಕಾರ್ಗಿಲ್ ಸಂಸ್ಮರಣೆ
ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಜು.26ರಂದು ಮಂಗಳವಾರ ೨೦ನೇ ಶತಮಾನದ ಮುಕ್ತಾಯದ ಕಾಲಘಟ್ಟ ಭಾರತದ ಪಾಲಿಗೊಂದು ಅವಿಸ್ಮರಣೀಯ ದಿನ, ಭಾರತದ ಸೈನಿಕರ ಮೊಗದಲ್ಲೊಂದು ನಗುವಿನ ಹೊನಲು ಮಿನುಗಿದ ಸಮಯ, ಕಪಟಿ ಪಾಕಿಸ್ತಾನಕ್ಕೆ ಸೋಲಿನ ರುಚಿಯನ್ನು ಉಣಿಸಿದ ಭಾರತದ ವೀರಪುತ್ರರು ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯ ನಿರ್ಮಿಸಿದ ರಸ ಘಳಿಗೆ ಕಾರ್ಗಿಲ್ ವಿಜಯೋತ್ಸವದ ದಿನವನ್ನು ನಿವೃತ್ತ ಸೈನಿಕರೊಂದಿಗೆ ಆಚರಿಸಲಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ, ಕಾರ್ಗಿಲ್ ಯುದ್ಧದ ಸಂದರ್ಭವನ್ನು ವಿವರಿಸುತ್ತಾ, “ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿದೆಸೆಯಿಂದಲೆ ಸೈನ್ಯಕ್ಕೆ ಸೇರುವಧೃಡ ನಿರ್ಧಾರ ಮಾಡಬೇಕು. ಪ್ರತಿಯೊಬ್ಬರಲ್ಲೂದೇಶಭಕ್ತಿ ನಿರ್ಮಾಣವಾಗಬೇಕು, ದೇಶಕ್ಕೋಸ್ಕರ ಕೆಲಸ ಮಾಡಬೇಕು.ಮುಂದಿನ ದಿನಗಳ್ಲಿ ಅಗ್ನಿಪಥಕ್ಕೆ ಸೇರಿದೇಶ ಸೇವೆಗೆ ಮುನ್ನುಡಿಯಿಡಿ. ಕಾರ್ಗಿಲ್‌ನಂತೆಯೆ ಮುಂದಿನ ದಿನಗಳಲ್ಲೂ ಭಾರತ ಶತ್ರುಗಳ ವಿರುದ್ಧ ಗೆಲ್ಲುತ್ತಾ ಇತಿಹಾಸ ನಿರ್ಮಿಸಲಿ.” ಎಂದು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಹೇಳಿದರು.
೨೦೦೧ರಲ್ಲಿ ಜಮ್ಮುಕಾಶ್ಮೀರ ಮುಖಾಮುಖಿ ಹೋರಾಟದಲ್ಲಿ ಸಹದ್ಯೋಗಿಗಳನ್ನು ಕಳೆದುಕೊಂಡರೂ ಧೃತಿಗೆಡದೆ ಭಯೋತ್ಪಾದರನ್ನು ಹಿಮ್ಮೆಟ್ಟಿಸಿದ ವೀರಯೋಧ, ನಕ್ಸಲ್ ನಿಗ್ರಹ ದಳದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ವಿಟ್ಲದ ಶಿವಪ್ರಕಾಶ್ ತಮ್ಮಅನುಭವವನ್ನು ಹಂಚಿಕೊಳ್ಳುತ್ತಾ, ನಮಗೆ ದೇಶ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕೇನು ಕೊಡ್ತೇವೆ ಅನ್ನೋದು ಮುಖ್ಯ. ದೇಶದ ಬಗ್ಗೆ ಭಕ್ತಿ – ಗೌರವಇರಲಿ, ಕೇವಲ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ದಿನದಂದು ತಿರಂಗಾರಕ್ಷಣೆ ಮಾಡದೇ ಪ್ರತಿ ದಿನ ತಿರಂಗಾದ ರಕ್ಷಣೆಯಾಗಬೇಕು. ಭಾರತದ ಕಿರೀಟವನ್ನು ಮತ್ತೆ ಪಡೆದಿದ್ದೇವೆ, ಅದನ್ನು ಉಳಿಸುವ ಪ್ರಯತ್ನ ಮಾಡಬೇಕು ನೀವು ಕೂಡ ಸೈನ್ಯಕ್ಕೆ ಸೇರಿದೇಶ ಸೇವೆ ಮಾಡಬೇಕು.” ಎಂದು ನುಡಿದರು.
ಅತಿಥಿ ಅಭ್ಯಾಗತರು ದೀಪ ಪ್ರಜ್ವಲನೆ ಮಾಡಿ, ಭಾರತ ಮಾತೆಗೆ ಪುಷ್ಪಾರ್ಚನೆ ಅರ್ಪಿಸಿ ಕಾರ್ಯಕ್ರಮ ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ, ನಿವೃತ್ತ ಹೆಮ್ಮೆಯ ಯೋಧರಿಗೆ ಶ್ರೀರಾಮ ವಿದ್ಯಾಸಂಸ್ಥೆ ಸಂಸ್ಥಾಪಕರಾದ ಕಲ್ಲಡ್ಕ ಡಾ| ಪ್ರಭಾಕರ್ ಭಟ್‌ರವರು ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಹಾಗೂ ಅವರ ಧರ್ಮಪತ್ನಿಯರಿಗೆ ಡಾ| ಕಮಲಾ ಪ್ರಭಾಕರ್ ಭಟ್‌ರವರು ಅರಶಿನ ಕುಂಕುಮ ಇಟ್ಟು ಮಡಿಲು ತುಂಬಿಸಿ ಗೌರವಿಸಿದರು.
ನಂತರ ೬ನೇ ತರಗತಿಯ ವೈಷ್ಣವಿ ಕಡ್ಯ, ದೀಪಾಶ್ರೀ ಹಾಗೂ ಧಾತ್ರಿರವರು ಪ್ರೇರಣಾಗೀತೆ ಹಾಡಿದರು. ವೇದಿಕೆಯಲ್ಲಿಸೈನಿಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿ ಆಪರೇಷನ್ ವಿಜಯ ಪದಕ ಪಡೆದಿರುವ ವಿಟ್ಲದ ಬಾಲಕೃಷ್ಣ ಗೌಡ ಹಾಗೂ ಅವರ ಪತ್ನಿ ಜಲಜಾಕ್ಷಿ, ಜಮ್ಮು ಕಾಶ್ಮೀರ, ಅಸ್ಸಾಂ ಹಾಗೂ ಪಂಜಾಬ್‌ಯಲ್ಲಿ ಸೇವೆ ಸಲ್ಲಿಸಿದ ತುಂಬೆಯ ಜಗದೀಶ ಕುಮಾರ್ ಟಿ ಮತ್ತು ಶೋಭಾ ದಂಪತಿಗಳು, ಸೇನಾವಧಿಯಲ್ಲಿ ನಾಯಕ್ ಪದವಿಯನ್ನು ಪಡೆದಿರುವ ತೆಕ್ಕಿ ಪಾಪುವಿನ ಚಂದ್ರಶೇಖರ್ ಹಾಗೂ ಗಾಯತ್ರಿ ದಂಪತಿಗಳು, ಭಯೋತ್ಪಾದಕ, ಆಪರೇಷನ್ ಮೇಘದೂತ ಹಾಗೂ ಪ್ಯಾರಚೂಟ್ ರೆಜಿಮೆಂಟ್‌ನಲ್ಲಿ ಪ್ಯಾರಾಕ ಮಾಂಡೋ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ದಯಾನಂದ ನಾಯಕ್, ಮದ್ರಾಸ್ ರೆಜಿಮೆಂಟ್‌ನಲ್ಲಿ ಸೇವೆಸಲ್ಲಿಸಿ ನಿವೃತ್ತರಾಗಿರುವ ನಾವೂರಿನ ಹರೀಶ ಎಂ ಮತ್ತು ಶ್ವೇತಾ ದಂಪತಿಗಳು, ಸೇನೆಯಲ್ಲಿ ಇಲೆಕ್ಟ್ರಾನಿಕ್ ಮೆಕಾನಿಕಲ್ ಇಂಜಿನಿಯರ್ ವಿಭಾಗದಲ್ಲಿ ಅಲ್ಲಿಪಾದೆಯ ಜಯಪ್ರಕಾಶ, ಪುಚ್ಚೆಕೆರೆಯಗಣೇಶ್‌ಕಾಮತ್, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯೆಡಾ| ಕಮಲಾ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್‌ಎನ್, ಆಡಳಿತ ಮಂಡಳಿ ಸದಸ್ಯರಾದ ಮಲ್ಲಿಕಾ ಶೆಟ್ಟಿ ಮತ್ತು ಲಕ್ಷ್ಮೀರಘುರಾಜ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ವೈಷ್ಣವಿ ಕಡ್ಯ ಸ್ವಾಗತಿಸಿ, ಲಿಪಿ ವಂದಿಸಿದರು. ವೈಷ್ಣವಿ ಕಾಮತ್ ನಿರೂಪಿಸಿದರು.