Published On: Mon, May 9th, 2022

1945ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ

ಮಾಸ್ಕೋ: ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ಸೋಲಿನ 77ನೇ ವಾರ್ಷಿಕೋತ್ಸವವನ್ನು ರಷ್ಯಾ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮಾಜಿ ಸೋವಿಯತ್ ರಾಷ್ಟ್ರಗಳಿಗೆ ಅಭಿನಂದನೆ ಸಲ್ಲಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ‘1945 ರಲ್ಲಿದ್ದಂತೆ, ಗೆಲುವು ನಮ್ಮದೇ ಎಂದು ಉಕ್ರೇನ್ ವಿರೋಧ ಭಾನುವಾರ ಪ್ರತಿಜ್ಞೆ ಮಾಡಿದರು.

Vladimir Putin

ಎರಡನೇ ಮಹಾಯುದ್ಧದ ಜಯವನ್ನು ಕುರಿತು ಸಭೆಯನ್ನು ಉದ್ದೇಶಿ ಮಾತನಾಡಿದ ಪುಟಿನ್, ಸೈನಿಕರು 1945ರಲ್ಲಿ ಹೋರಾಟ ಮಾಡಿದಂತೆ ಈಗ ನಮ್ಮ ಸೈನಿಕರು ಗೆಲುವು ನಮ್ಮದೇ ಎಂಬ ವಿಶ್ವಾಸದಿಂದ ಉಕ್ರೇನ್‌ನಲ್ಲಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಭೂಮಿಯನ್ನು ನಾಜಿ ಎಂಬ ಕೆಟ್ಟಶಕ್ತಿಗಳಿಂದ ಮುಕ್ತಗೊಳಿಸಲು ಸೈನಿಕರು ಹೋರಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.

ವಿವಿಧ ದೇಶಗಳ ಜನರಿಗೆ ನೋವುಂಟು ಮಾಡಿದ ನಾಜಿಸಂ ಮರುಹುಟ್ಟು ತಡೆಯುವುದು ನಮ್ಮ ಕರ್ತವ್ಯವಾಗಿದೆ. ಲೆಕ್ಕವಿಲ್ಲದಷ್ಟು ತ್ಯಾಗಗಳನ್ನು ಮಾಡಿ ನಮ್ಮ ಸೈನ್ಯವು ನಾಜಿಸಂ ಅನ್ನು ಹೊಡೆದುರುಳಿಸಿದೆ. ಆದರೆ ಈಗ ಮತ್ತೆ ಅದು ತಲೆ ಎತ್ತುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎರಡನೇ ಮಹಾಯುದ್ಧದಲ್ಲಿ ಸೋತವರನ್ನು ಮತ್ತೆ ತಲೆ ಎತ್ತದಂತೆ ಮಾಡುವುದು ನಮ್ಮ ಪವಿತ್ರ ಕರ್ತವ್ಯವಾಗಿದೆ. ಇದು ಮಾಸ್ಕಾದ ಮಹಾನ್ ದೇಶಭಕ್ತಿಯ ಯುದ್ಧವಾಗಿದೆ ಎಂದರು.

ಈ ವೇಳೆ ಅವರು, ಉಕ್ರೇನ್‍ನ ಎಲ್ಲ ನಿವಾಸಿಗಳು ಶಾಂತಿಯುತ ಮತ್ತು ನ್ಯಾಯಯುತ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ನಾನು ಬಯಸುತ್ತೇನೆ ಎಂದು ತಿಳಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter